Sudeep: ಬಿಗ್‌ ಬಾಸ್‌ ಕನ್ನಡ 11 ಗ್ರ್ಯಾಂಡ್‌ ಓಪನಿಂಗ್ ಕಿಚ್ಚ ಸುದೀಪ್‌ ಲುಕ್‌ ರಿವೀಲ್!

Sun, 29 Sep 2024-2:04 pm,

Sudeep: ಬಿಗ್‌ಬಾಸ್‌ ಸೀಸನ್‌ 11 ಗ್ರಾಂಡ್‌ ಓಪನಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಈ ದೊಡ್ಡ ಉದ್ಘಾಟನೆ ಸಮಾರಂಭಕ್ಕೂ ಮುಂಚೆಯೇ ಸುದೀಪ್‌ ಲುಕ್‌ ರಿವೀಲ್‌ ಆಗಿದೆ, ಕಿಚ್ಚನ ಕಡಕ್‌ ಲುಕ್‌ ನೋಡಿ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. 

ಎಲ್ಲಾ ಸೀಸನ್‌ನಂತೆಯೇ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಸೀಸನ್‌ 11 ರಲ್ಲೂ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ಕಂಡು ಫ್ಯಾನ್ಸ್‌ ಪಿದಾ ಆಗಿದ್ದಾರೆ.   

ಕಿಚ್ಚಾ ಸುದೀಪ್‌ ಅವರ ಫ್ಯಾಷನ್‌ ಸೆನ್ಸ್‌ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ, ಅದರಲ್ಲೂ ಬಿಗ್‌ಬಾಸ್‌ನಲ್ಲಿ ಕಿಚ್ಚ ಶನಿವಾರ ಭಾನುವಾರ ಮೀಟಿಂಗ್‌ ಇಡ್ತಾ ಇದ್ದಾರೆ ಅಂದ್ರೆನೆ, ಅವರು ಯೂನಿಕ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತಾನೇ ಅರ್ಥ.

ಇದೀಗ ಕಲರ್ಸ್‌ ಕನ್ನಡ ವಾಹಿನಿ ಬಿಗ್‌ಬಾಸ್‌ ಸೀಸನ್‌ 11ರ ಗ್ರಾಂಡ್‌ ಓಪನಿಂಗ್‌ನ ಪ್ರೋಮೋವನ್ನು ಶೇರ್‌ ಮಾಡಿಕೊಂಡಿದೆ. ಇದರಲ್ಲಿ ಕಿಚ್ಚನ ಲುಕ್‌ ಕಂಡ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ಇನ್ನೂ, ಕಿಚ್ಚ ಇಂದು ನಡೆಯಲಿರುವ ಗ್ರಾಂಡ್‌ ಓಪನಿಂಗ್‌ ಸಮಾರಂಭಕ್ಕೆ ಗೋಲ್ಡ್‌ ಬಣ್ಣದ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. 

ಇಂದು ಸಂಜೆ(ಸೆಪ್ಟೆಂಬರ್‌ 29) ಬಿಗ್‌ಬಾಸ್‌ ಸೀಸನ್‌ 11ರ ಗ್ರಾಂಡ್‌ ಓಪನಿಂಗ್‌ ಸಂಜೆ 6 ಗಂಟೆಗೆ ಶುರುವಾಗಲಿದ್ದು, ದೊಡ್ಡ ಸಮಾರಂಭದ ಉದ್ಘಾಟನೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದಾರೆ.

ಅದರಲ್ಲೂ ನಿನ್ನೆ(ಸೆಪ್ಟೆಂಬರ್‌ 28) ನಡೆದ ರಾಜಾ ರಾಣಿ ಕಾರ್ಯಕ್ರಮದಲ್ಲಿ ಮನೆಗೆ ಎಂಟ್ರಿ ಕೊಡಲಿರುವ ಕೆಲವು ಸ್ಪರ್ಧಿಗಳ ಹೆಸರು ರಿವೀಲ್‌ ಆಗಿದ್ದು, ಇಂದು ಯಾರೆಲ್ಲಾ ಮೆನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link