ತನ್ನ ತಾಯಿಗಾಗಿ ಕಿಚ್ಚ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ..? ತಮ್ಮ ಕೊನೆ ಉಸಿರಿನ ತನಕ ಸುದೀಪ್ ಅವರ ತಾಯಿ ಇದನ್ನು ಮಗುವಿನಂತೆ ಜೋಪಾನ ಮಾಡಿದ್ದರಂತೆ..!
Kichcha sudeep first gift to mother: ತಮ್ಮ 86 ನೇ ವಯಸ್ಸಿನಲ್ಲಿ ಕಿಚ್ಚ ಸುದೀಪ್ ಅವರ ತಾಯಿ, ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಕಿಚ್ಚ ಹಾಗೂ ಅವರ ತಾಯಿಯ ನಡುವೆ ಇದ್ದ ಪ್ರೀತಿ ಅಪಾರವಾದ್ದು, ಈ ಇಬ್ಬರ ಬಂದ ಎಂತಹದ್ದು ಎಂಬುದನ್ನು ವರ್ಣಿಸುವುದಕ್ಕೂ ಸಾಧ್ಯವಾಗುವುದಿಲ್ಲ.
ಅಮ್ಮನೆಂದರೆ ಕಿಚ್ಚನಿಗೆ ಬಾಲ್ಯದಿಂದಲೂ ಪ್ರಾಣ. ತಾನು 7 ನೇ ತರಗತಿಯಲ್ಲಿದ್ದಾಗಲೇ ಕಿಚ್ಚ ತ್ನತಾಯಿಗಾಗಿ ವಿಶೇಷ ಉಡುಗೊರೆಯನ್ನು ತಂದುಕೊಟ್ಟಿದ್ದಂತೆ.
ಶಾಲೆಯಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋದಾಗ, ತಾವು ಸೇವಿಸಿ ಇಟ್ಟುಕೊಂಡಿದ್ದ ಪಾಕೆಟ್ ಮನಿಯಿಂದ ಕಿಚ್ಚ ಸುದೀಪ್ ತಮ್ಮ ತಾಯಿಗಾಗಿ, ಸೀರೆ ಒಂದನ್ನು ತಂದುಕೊಟ್ಟಿದ್ದರಂತೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ತಮ್ಮ ತಾಯಿ ಕಳುಹಿಸಿದ್ದ ಈ ಸೀರೆಯನ್ನು ನೋಡಿ ಹಳೆಯ ನೆನಪುಗಳನ್ನು ನೆನೆಯುತ್ತಾ, ಆಗಿನ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು
ಸುದೀಪ್ ಅವರು ತಂದುಕೊಟ್ಟಿದ್ದ ಈ ವಿಶೇಷ ಉಡುಗೊರೆಯನ್ನು ಅವರ ತಾಯಿ ಇಂದಿಗೂ ಭದ್ರ ಪಡಿಸಿ ಇಟ್ಟುಕೊಂಡಿದ್ದರು.