ಕಿಡ್ನಿ ಸಮಸ್ಯೆ ಇರುವವರು ಈ ರೀತಿಯ ಲಘು ವ್ಯಾಯಾಮಗಳನ್ನು ಮಾಡಿ ನೋಡಿ , ಪರಿಹಾರ ಸಿಗಲಿದೆ
ವಾಕಿಂಗ್ : ದಿನದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭವಾದ ಮತ್ತು ಸರಳವಾದ ವ್ಯಾಯಾಮ ಇದಾಗಿದೆ. ವ್ಯಾಯಾಮ ಮಾಡಲು ಸಮಯ ಸಿಗದವರಿಗೆ ಅಥವಾ ವ್ಯಾಯಾಮವನ್ನೇ ಮಾಡದವರಿಗೆ ವಾಕಿಂಗ್ ಉತ್ತಮ ವ್ಯಾಯಾಮ. ಆರಂಭದಲ್ಲಿ 10-15 ನಿಮಿಷಗಳ ಕಾಲ ನಡೆಡು, ನಂತರ ಕ್ರಮೇಣ ಇದರ ಅವಧಿಯನ್ನು ಹೆಚ್ಚಿಸಬಹುದು.
ಯೋಗಾಭ್ಯಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಲು ಉತ್ತಮ ಮಾರ್ಗವಾಗಿದೆ. ಇದನ್ನು ಜನರು ಕ್ರಮೇಣ ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಮೂತ್ರಪಿಂಡದ ಕಾಯಿಲೆಯಿಂದ ಉಂಟಾಗುವ ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ. ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಚರ್ಚಿಸಿ ಸುಲಭವಾದ ಯೋಗ ಭಂಗಿಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ಅಭ್ಯಾಸ ಮಾಡಿ.
ಈಜುವುದು ಮೋಜಿನ ಚಟುವಟಿಕೆ ಮಾತ್ರವಲ್ಲ, ಇದು ಉತ್ತಮ ಮತ್ತು ಸುಲಭವಾದ ವ್ಯಾಯಾಮವೂ ಹೌದು. ನೀರಿನಲ್ಲಿ ಈಜುವಾಗ ಕೀಲುಗಳ ಮೇಲೆ ಒತ್ತಡ ಕಡಿಮೆಯಾಗುವುದರಿಂದ ಕಿಡ್ನಿ, ಅಧಿಕ ತೂಕದಿಂದ ಪರಿಹಾರ ಸಿಗಲಿದೆ.
ನೃತ್ಯವನ್ನು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಜನರು ಅದನ್ನು ಆನಂದಿಸುವುದು ಮಾತ್ರವಲ್ಲ, ನೃತ್ಯವು ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ನೃತ್ಯವು ಉತ್ತಮ ವ್ಯಾಯಾಮ ಎಂದು ಸಾಬೀತಾಗಲಿದೆ.