Kidney: ವೃದ್ಧಾಪ್ಯದವರೆಗೂ ಕಿಡ್ನಿ ಆರೋಗ್ಯವಾಗಿರಬೇಕಾ? ಈ ಅಭ್ಯಾಸ ರೂಢಿಸಿಕೊಳ್ಳಿ
ನೀವು ದೀರ್ಘಕಾಲದವರೆಗೆ ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಬಯಸಿದರೆ, ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಐಬುಪ್ರೊಫೇನ್, ಆಸ್ಪಿರಿನ್, ನ್ಯಾಪ್ರೋಕ್ಸೆನ್ ಸೋಡಿಯಂ ಸಾಲ್ಟ್‌ನಂತಹ ಔಷಧಿಗಳಿಂದ ದೂರವಿರಬೇಕು. ಈ ಎಲ್ಲಾ ಔಷಧಿಗಳು ನಿಮ್ಮ ಮೂತ್ರಪಿಂಡವನ್ನು ಹಾನಿಗೊಳಿಸುತ್ತವೆ.
ನೀವು ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಬಯಸಿದರೆ, ಆಹಾರದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಸೇರಿಸಿಕೊಳ್ಳಿ. ಈ ಎಲ್ಲಾ ವಸ್ತುಗಳು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯಿಂದ ರಕ್ಷಿಸುತ್ತವೆ ಮತ್ತು ಮೂತ್ರಪಿಂಡವನ್ನು ಆರೋಗ್ಯವಾಗಿಡುತ್ತವೆ.
ನೀವು ದೀರ್ಘಕಾಲ ಆರೋಗ್ಯವಾಗಿರಲು ಬಯಸಿದರೆ, ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಿ ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ವ್ಯಾಯಾಮದಿಂದ ಆರೋಗ್ಯ ಮಾತ್ರವಲ್ಲದೆ, ನಿಮ್ಮ ಮೂತ್ರಪಿಂಡವೂ ಸಹ ಆರೋಗ್ಯಕರವಾಗಿರುತ್ತದೆ. ನೀವು ನಿಯಮಿತವಾಗಿ ವ್ಯಾಯಾಮ ಮಾಡಿದರೆ ದೀರ್ಘಕಾಲದ ಕಾಯಿಲೆಗಳಿಂದ ದೂರವಿರಬಹುದು.
ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರಬೇಕು. ಇದು ನಿಮ್ಮನ್ನು ಹೈಡ್ರೇಟ್ ಆಗಿ ಇಡುವುದು ಮಾತ್ರವಲ್ಲದೆ ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಈ ವಿಷ ಪದಾರ್ಥ ನಿಮ್ಮ ದೇಹದಲ್ಲಿದ್ದರೆ ಕಲ್ಲುಗಳ ರೂಪ ಪಡೆದುಕೊಂಡು ಸಮಸ್ಯೆಯನ್ನುಂಟು ಮಾಡುತ್ತವೆ.
ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುವಿಕೆ ಎರಡೂ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದರೆ ಅಥವಾ ರಕ್ತದೊತ್ತಡ ಹೆಚ್ಚಾದರೆ ಕಿಡ್ನಿಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಮತ್ತು ಮೂತ್ರಪಿಂಡದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.