Kiradu Temple: ಈ ಮಂದಿರದಲ್ಲಿ ರಾತ್ರಿ ತಂಗುವ ಭಕ್ತರು ಕಲ್ಲಾಗುತ್ತಾರೆ!
ಈ ನಿಗೂಢ ದೇವಸ್ಥಾನವು ರಾಜಸ್ಥಾನದ (Rajasthan) ಬಾರ್ಮರ್ (Barmer) ಜಿಲ್ಲೆಯಲ್ಲಿದೆ. ಈ ದೇವಸ್ಥಾನವನ್ನು 'ಕಿರಡು ದೇವಸ್ಥಾನ' (Kiradu Temple) ಎಂದೂ ಕರೆಯುತ್ತಾರೆ. ಕ್ರಿಸ್ತಪೂರ್ವ 1161 ರಲ್ಲಿ ಈ ಸ್ಥಳದ ಹೆಸರು 'ಕಿರಾತ್ ಕುಪ್' ಎಂದು ಹೇಳಲಾಗಿದೆ. ರಾಜಸ್ಥಾನದಲ್ಲಿದ್ದರೂ, ಈ ದೇವಸ್ಥಾನವನ್ನು ದಕ್ಷಿಣ ಭಾರತದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಜನರು ಈ ದೇವಸ್ಥಾನವನ್ನು ರಾಜಸ್ಥಾನದ ಖಜುರಾಹೊ ಎಂದೂ ಕರೆಯುತ್ತಾರೆ.
ಇದು ಐದು ದೇವಸ್ಥಾನಗಳ ಸರಣಿ. ಈ ಸರಣಿಯ ಬಹುತೇಕ ದೇವಾಲಯಗಳು ಈಗ ಪಾಳು ಬಿದ್ದಿವೆ. ಶಿವ ದೇವಸ್ಥಾನ (Shiva Temple) ಮತ್ತು ವಿಷ್ಣು ದೇವಾಲಯದ ಸ್ಥಿತಿ ಚೆನ್ನಾಗಿದೆ. ಈ ದೇವಸ್ಥಾನವನ್ನು ನಿರ್ಮಿಸಿದವರು ಯಾರು? ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ಜನರು ಖಂಡಿತವಾಗಿಯೂ ದೇವಾಲಯದ ನಿರ್ಮಾಣದ ಬಗ್ಗೆ ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ.
ಒಂದಾನೊಂದು ಕಾಲದಲ್ಲಿ ಈ ದೇವಸ್ಥಾನದಲ್ಲಿ ಸಂಭವಿಸಿರುವ ಘಟನೆಯಿಂದ ಜನರು ಭಯಭೀತರಾಗಿದ್ದಾರೆ. ಆ ಘಟನೆಯ ಬಗ್ಗೆ ಇಂದಿಗೂ ಕೂಡ ಜನರಲ್ಲಿ ಭಯವಿದೆ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಹಲವು ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ತಮ್ಮ ಶಿಷ್ಯರೊಂದಿಗೆ ಈ ದೇವಸ್ಥಾನವನ್ನು ತಲುಪಿದ್ದರು. ಒಂದು ದಿನ ಸನ್ಯಾಸಿಯು ತನ್ನ ಶಿಷ್ಯರನ್ನು ದೇವಸ್ಥಾನದಲ್ಲಿಯೇ ಬಿಟ್ಟು ವಿಹಾರಕ್ಕೆ ತೆರಳಿದ್ದರು. ಈ ಸಮಯದಲ್ಲಿ, ಓರ್ವ ಶಿಷ್ಯನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಸಾಧುವಿನ ಇತರ ಶಿಷ್ಯರು ಗ್ರಾಮಸ್ಥರಿಂದ ಸಹಾಯ ಕೇಳಿದರು, ಆದರೆ ಯಾರೂ ಕೂಡ ಅವರಿಗೆ ಸಹಾಯ ಮಾಡಲಿಲ್ಲ. ಈ ವಿಷಯವನ್ನು ತಿಳಿದ ಸನ್ಯಾಸಿಯು ಕುಪಿತಗೊಂಡು ಸಂಜೆಯ ನಂತರ ಎಲ್ಲರೂ ಕಲ್ಲಾಗುವಂತೆ ಶಾಪ ನೀಡಿದ್ದರಂತೆ.
ಇದನ್ನೂ ಓದಿ- Mysterious Temples: ದೇಶದ ಕೆಲ ನಿಗೂಢ ದೇವಾಲಯಗಳಿವು
ಜಾನಪದ ಕಥೆಗಳ ಪ್ರಕಾರ, ಒಬ್ಬ ಮಹಿಳೆ ಸನ್ಯಾಸಿಯ ಶಿಷ್ಯರಿಗೆ ಸಹಾಯ ಮಾಡಿದಳು. ಸನ್ಯಾಸಿಯು ಇದರಿಂದ ಸಂತಸಗೊಂಡು ಆ ಮಹಿಳೆಗೆ ಸಂಜೆಯ ಮೊದಲು ಗ್ರಾಮವನ್ನು ತೊರೆಯಬೇಕು ಮತ್ತು ಹಿಂತಿರುಗಿ ನೋಡಬೇಡ ಎಂದು ಹೇಳಿದರು. ಮಹಿಳೆ ಹೊರಡುವಾಗ ಸ್ವಲ್ಪದೂರ ಮುಂದೆ ನಡೆದು ಕುತೂಹಲದಿಂದ ಹಿಂತಿರುಗಿ ನೋಡಿದಳು. ಬಳಿಕ ಕಲ್ಲಾಗಿ ಬದಲಾದಳು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Mysterious Lake: ದೇಶದ ಈ ನಿಗೂಢ ಸರೋವರದಲ್ಲಿದೆ ನೂರಾರು ಮಾನವ ಅಸ್ಥಿಪಂಜರಗಳು
ಆ ಮಹಿಳೆಯ ವಿಗ್ರಹವನ್ನು ಈಗಲೂ ದೇವಾಲಯದ ಬಳಿ ಸ್ಥಾಪಿಸಲಾಗಿದೆ. ಈ ಶಾಪದಿಂದಾಗಿ, ಹತ್ತಿರದ ಹಳ್ಳಿಯ ಜನರಲ್ಲಿ ಭೀತಿ ಹರಡಿತು. ಈ ಕಾರಣದಿಂದಾಗಿ ಇಂದಿಗೂ ಸಹ ಈ ದೇವಸ್ಥಾನದಲ್ಲಿ ಯಾರು ತಂಗುತ್ತಾರೋ ಅವರು ಕೂಡ ಕಲ್ಲಾಗುತ್ತಾರೆ ಎಂಬ ನಂಬಿಕೆ ಜನರಲ್ಲಿ ಇದೆ. ಹಾಗಾಗಿಯೇ ಮುಸ್ಸಂಜೆಯ ನಂತರ ಈ ದೇವಸ್ಥಾನದಲ್ಲಿ ಉಳಿಯಲು ಯಾರೂ ಧೈರ್ಯ ಮಾಡುವುಡಿಲ್ಲ ಎನ್ನಲಾಗಿದೆ.