ದೇಶದ ವಿವಿಧ ಭಾಗಗಳಿಂದ ಕಿಸಾನ್ ಮುಕ್ತಿ ಮಾರ್ಚ್ ಗೆ ಆಗಮಿಸಿದ ರೈತರು - Photos
ಈ ರೈತರ ಹೋರಾಟಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ ನ ಫಾರೂಕ್ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್ ನ ದಿನೇಶ್ ತ್ರಿವೇದಿ, ಲೋಕತಾಂತ್ರಿಕ ಜನತಾ ದಳದ ಶರದ್ ಯಾದವ್, ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಪತ್ರಕರ್ತ ಪಿ. ಸಾಯಿನಾಥ್ ಸೇರಿದಂತೆ ಹಲವು ನಾಯಕರು ಈ ರ್ಯಾಲಿಗೆ ಬೆಂಬಲ ಸೂಚಿಸಿದ್ದಾರೆ..(Image Courtesy: IANS)
"ಅಬ್ ಹಕ್ ಕೆ ಬಿನಾ ಬಿ ಕ್ಯಾ ಜೀನಾ, ಯೆ ಜೀನ್ ಕೆ ಸಮಾನ್ ನಹಿ (ಹಕ್ಕುಗಳಿಲ್ಲದೆ ಹೋದರೆ ಬದುಕಿಗೆ ಅರ್ಥವಿಲ್ಲ ), ಎಂದು ಘೋಷಣೆ ಕೂಗಿದ ರೈತರು ಕಿಸಾನ್ ಸಂಸದ್ ಸಿದ್ದಪಡಿಸಿದ ಎರಡು ಕಿಸಾನ್ ಮುಕ್ತಿ ಮಸೂದೆಗಳನ್ನು ಸಂಸತ್ ನಲ್ಲಿ ಜಾರಿಗೆ ತರಬೇಕು. ಆ ಮೂಲಕ ,ಸಾಲ,ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು. ಅಲ್ಲದೆ ಎಂಎಸ್ ಸ್ವಾಮಿನಾಥನ್ ವರದಿಯನ್ನು ಸಹ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. (Image Courtesy: IANS)
ರೈತರು ಹೇಳುವಂತೆ ತಮಗೆ ನೀಡಿರುವ ಭರವಸೆಗಳೆಲ್ಲವು ಸಹಿತ ಈಡೇರದೆ ಹೋಗಿವೆ. ಕೃಷಿ ಕ್ಷೇತ್ರವನ್ನು ಬೃಹತ್ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಈ ಬಿಕ್ಕಟ್ಟು ಬಹಳ ವರ್ಷಗಳಿಂದಲೂ ನಡೆದು ಬಂದಿದೆ. ಕಳೆದ ಎರಡು ದಶಕಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ವಹಿಸುತ್ತಿಲ್ಲ ಎನ್ನುತ್ತಿವೆ ರೈತ ಸಂಘಟನೆಗಳು. (Image Courtesy: PTI)
.ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಇತರ ರಾಜ್ಯಗಳ ರೈತರು ಮತ್ತು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. (Image Courtesy: IANS)
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಈ ಕಿಸಾನ್ ಮುಕ್ತಿ ಮಾರ್ಚ್ ಮೂಲಕ ದಿಲ್ಲಿ ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ.ಈ ಸಮಿತಿ ಅಡಿಯಲ್ಲಿ ಸುಮಾರು 180ಕ್ಕೂ ಅಧಿಕ ರೈತ ಸಂಘಟನೆಗಳು ಒಳಗೊಂಡಿವೆ.ಈಗಾಗಲೇ ಕಿಸಾನ್ ಮುಕ್ತಿ ಮಸೂದೆಗಳಿಗೆ 21 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. (Image Courtesy: IANS)
ನವಂಬರ್ 2017ರಲ್ಲಿ ನಡೆದ ಕಿಸಾನ್ ಸಂಸದ್ ನಲ್ಲಿ ಸಿದ್ದಪಡಿಸಲಾದ ಎರಡು ಕಿಸಾನ್ ಮುಕ್ತಿ ಮಸೂದೆಗಳನ್ನು ಸಂಸತ್ ನಲ್ಲಿ ಜಾರಿಗೆ ತರಬೇಕು. ಆ ಮೂಲಕ ,ಸಾಲ,ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು. ಅಲ್ಲದೆ ಎಂಎಸ್ ಸ್ವಾಮಿನಾಥನ್ ವರದಿಯನ್ನು ಸಹ ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. . (Image Courtesy: IANS)
'ಚಲೋ ದಿಲ್ಲಿ' ಎಂದು ಸಹ ಕರೆಯಲ್ಪಡುವ ಕಿಸಾನ್ ಮುಕ್ತಿ ಮಾರ್ಚ್, ದೇಶದ ಕೃಷಿ ಬಿಕ್ಕಟ್ಟನ್ನು ಗಮನ ಸೆಳೆಯುವ ಗುರಿಯನ್ನು ಹೊಂದಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸತ್ ನಲ್ಲಿ 21 ದಿನಗಳ ಕಾಲ ವಿಶೇಷ ಅಧಿವೇಶನವನ್ನು ನಡೆಸಬೇಕು, ಅಲ್ಲದೇ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು (Image Courtesy: IANS)
ಲಕ್ಷಾಂತರ ರೈತರು ದೇಶದ ವಿವಿಧ ಭಾಗಗಳಿಂದ ದೆಹಲಿ ರಾಮಲೀಲಾ ಮೈದಾನದಿಂದ ಸಂಸದ ಮಾರ್ಗವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ (Image Courtesy: IANS)