Kitchen Hacks: ದೀರ್ಘ ಕಾಲದವರೆಗೆ ಪನ್ನೀರ್ ಅನ್ನು ಫ್ರೆಶ್ ಆಗಿಡಲು ಈ ವಿಧಾನ ಅನುಸರಿಸಿ
1. ಕಾಟನ್ ಬಟ್ಟೆಯಲ್ಲಿ ಸುತ್ತಿಡಿ - ಪನೀರ್‌ನ ತಾಜಾತನವನ್ನು ರಕ್ಷಿಸಲು ಅದನ್ನು ನೀವು ಸ್ವಲ್ಪ ಒದ್ದೆಯಾಗಿರುವ ಕಾಟನ್ ಬಟ್ಟೆಯಲ್ಲಿ ಸುತ್ತಿಡಬಹುದು. ಪನೀರ್ ಅನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ನಂತರ ಫ್ರಿಜ್ ನಲ್ಲಿಡಿ. ಇದು ಪನೀರ್ ಅನ್ನು ಮೃದುವಾಗಿರಿಸುತ್ತದೆ.
2. 3 ರಿಂದ ನಾಲ್ಕು ದಿನಗಳ ಕಾಲ ಇಡಲು - ಪನೀರ್ ಅನ್ನು ಮೂರರಿಂದ ನಾಲ್ಕು ದಿನಗಳ ಕಾಲ ಶೇಖರಿಸಿ ಇಡಲು ಅದನ್ನು ನೀರಿನಲ್ಲಿರಿಸಿ ಅದನ್ನು ಫ್ರಿಡ್ಜ್ ನಲ್ಲಿಡಿ. ಆದರೆ, ಪನ್ನೀರ್ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿರಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಿ. ಬಳಿಕ ಆ ಪಾತ್ರೆಯನ್ನು ಫ್ರಿಜ್ ನಲ್ಲಿಡಿ. ಮಾರನೆ ದಿನ ಅದನ್ನು ನೀವು ಬಳಸುವುದಿಲ್ಲ ಎಂದಾದರೆ, ನೀರನ್ನು ಬದಲಿಸಿ. ಅದನ್ನು ಬಳಕೆ ಮಾಡುವವರೆಗೆ ನೀರನ್ನು ಬದಲು ಮಾಡಿ. ಇದರಿಂದ ಪನೀರ್ ಮೃದುವಾಗಿರಲಿದ್ದು, ವಾಸನೆ ಕೂಡ ಬರುವುದಿಲ್ಲ.
3. ಉಪ್ಪಿನ ನೀರಿನಲ್ಲಿಡಿ - ಒಂದು ವೇಳೆ ಪನೀರ್ ಅನ್ನು ನಿಮಗೆ ಒಂದು ವಾರದವರೆಗೆ ಸಂಗ್ರಹಿಸಿ ಇಡಲು, ಪಾತ್ರೆಯೊಂದರಲ್ಲಿ ನೀರನ್ನು ಹಾಕಿ ಮತ್ತು ಅದರಲ್ಲಿ ಉಪ್ಪು ಬೆರೆಸಿ. ಈಗ ಈ ಪಾತ್ರೆಯಲ್ಲಿ ಪನೀರ್ ಅನ್ನು ಇಡಿ. ಈ ನೀರನ್ನು ಕೂಡ ಎರಡು ದಿನಗಳಿಗೊಮ್ಮೆ ಬದಲಾಯಿಸಿ. ಇದರಿಂದ ಪನ್ನೀರ್ ತಾಜಾ ಹಾಗೂ ಮೃದುವಾಗಿ ಇರಲಿದೆ.
4. ಈ ವಿಧಾನ ಕೂಡ ಅನುಸರಿಸಿ - ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಪನೀರ್ ಅನ್ನು ಸಂಗ್ರಹಿಸಿ ಇಡಲು ಅದನ್ನು ಸಣ್ಣ ಸಣ್ಣ ತುಂಡುಗಳಲ್ಲಿ ಕತ್ತರಿಸಿ ಅದನ್ನು ಕೆಲ ಸಮಯದವರೆಗೆ ಫ್ರೀಜರ್ ನಲ್ಲಿಡಿ. ಸ್ವಲ್ಪ ಸಮಯದ ಬಳಿಕ ಈ ತುಣುಕುಗಳನ್ನು ಜಿಪ್ ಲಾಕ್ ಮಾಡಿರುವ ಬ್ಯಾಗ್ ನಲ್ಲಿರಿಸಿ ಅದನ್ನು ಪುನಃ ಫ್ರೀಜರ್ ನಲ್ಲಿಡಿ. ಪನ್ನೀರ್ ಬಳಕೆಗೂ ಮುನ್ನ ಅದನ್ನು ಫ್ರೀಜರ್ ನಿಂದ ತೆಗೆದು ಸ್ವಲ್ಪ ಸಮಯ ಹೊರಗಿಟ್ಟು ನಂತರ ಬಳಸಿ. ಏಕೆಂದರೆ ಫ್ರೀಜರ್ ನಿಂದ ಹೊರತೆಗೆದಾಗ ಅದು ಗಟ್ಟಿಯಾಗಿರುತ್ತದೆ. ಅದನ್ನು ನೀವು ಉಗುರು ಬೆಚ್ಚನೆಯ ನೀರಲ್ಲಿ ಕೂಡ ಹಾಕಬಹುದು.