ಅಡುಗೆಮನೆಯ ಈ ದಿಕ್ಕಿನಲ್ಲಿ `ಒಲೆ` ಇದ್ದರೆ ಆದಾಯಕ್ಕಿಂತ ಖರ್ಚೆ ಹೆಚ್ಚು, ಮುಗಿಯುವುದೇ ಇಲ್ಲ ಹಣಕಾಸಿನ ತೊಂದರೆ...!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಎಲ್ಲಾ ಕೋಣೆಗಳಿಗಿಂತ ಅಡುಗೆ ಮನೆ ತುಂಬಾ ವಿಶೇಷ. ಅಡುಗೆ ಮನೆಯಲ್ಲಿರುವ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಇದು ಆರೋಗ್ಯದ ಮೇಲಷ್ಟೇ ಅಲ್ಲ ಮನೆಯ ಹಣಕಾಸಿನ ಸ್ಥಿತಿಯ ಮೇಲೂ ಪರಿಣಾಮ ಉಂಟು ಮಾಡುತ್ತದೆ.
ವಾಸ್ತು ಪ್ರಕಾರ, ಅಡುಗೆ ಮಾಡುವ ಒಲೆಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇಲ್ಲದಿದ್ದರೆ, ಇದರಿಂದ ಭಾರೀ ನಷ್ಟವಾಗುತ್ತದೆ.
ವಾಸ್ತು ತಜ್ಞರ ಪ್ರಕಾರ, ಅಡುಗೆಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಅಡುಗೆ ಒಲೆಯನ್ನು ಇಡಲೇಬಾರದು. ಯಾಕ್ ಗೊತ್ತಾ...
ಮನೆಯ ಉತ್ತರ ದಿಕ್ಕಿನಲ್ಲಿ ಸಂಪತ್ತಿನ ದೇವರಾದ ಕುಬೇರ ನೆಲೆಸಿರುತ್ತಾನೆ. ಹಾಗಾಗಿ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಅಡುಗೆ ಒಲೆಯನ್ನು ಇಡಬಾರದು.
ಈ ದಿಕ್ಕಿನಲ್ಲಿ ಅಪ್ಪಿತಪ್ಪಿ ಅಡುಗೆ ಒಲೆ ಇಟ್ಟರೂ ಇದು ಮನೆಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ, ಎಷ್ಟೇ ಹಣ ಸಂಪಾದಿಸಿದರೂ ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಮನೆ ಯಜಮಾನ ಸಾಲದ ಸುಳಿಯಲ್ಲಿ ಸಿಲುಕುವ ಸಂಭವವಿರುತ್ತದೆ.
ಅಡುಗೆ ಮನೆಯಲ್ಲಿ ಒಲೆ ಯಾವಾಗಲೂ ಪೂರ್ವ ದಿಕ್ಕಿಗೆ ಇದ್ದರೆ ಒಳ್ಳೆಯದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.