ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಹಾಕಬಾರದು !ದರಿದ್ರ ಬೆನ್ನತ್ತಿ, ದುಡಿದ ಹಣವೆಲ್ಲಾ ಖರ್ಚಾಗುತ್ತಲೇ ಹೋಗುವುದು!ಬದುಕು ಕೂಡಾ ಮಗುಚಿಯೇ ಬೀಳುವುದು
ಮನೆಯಲ್ಲಿ ಬಹು ಮುಖ್ಯವಾಗಿರುವ ಕೋಣೆ ಎಂದರೆ ಅಡುಗೆ ಕೋಣೆ. ನಮ್ಮ ಬದುಕನ್ನು ನಿರ್ಧರಿಸುವುದೇ ಇದೇ ಜಾಗವಂತೆ.
ಅಡುಗೆಮನೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಡುಗೆಮನೆಯಲ್ಲಿ ಅನೇಕ ಪಾತ್ರೆಗಳ ಬಳಕೆಯಾಗುತ್ತವೆ. ಆ ಪೈಕಿ ಈ ಎರಡು ಪಾತ್ರೆಯನ್ನು ಮಗುಚಿ ಇಡಲೇ ಬಾರದು.
ಚಪಾತಿ, ದೋಸೆ ಮಾಡುವ ಕಾವಲಿಯನ್ನು ಎಂದಿಗೂ ಮಗುಚಿ ಹಾಕಬಾರದು. ಹೀಗೆ ಮಾಡಿದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎನ್ನುತ್ತದೆ ವಾಸ್ತು. ಸಾಲ ಹೆಚ್ಚಾಗಿ, ಜೀವನದಲ್ಲಿ ಬಡತನವನ್ನು ಎದುರಿಸಬೇಕಾಗಬಹುದು.
ಇದರ ಜೊತೆಗೆ ಬಾಣಲೆಯನ್ನು ಕೂಡಾ ಮಗುಚಿ ಇಡಬಾರದು ಎನ್ನುವ ನಿಯಮ ವಾಸ್ತುಶಾಸ್ತ್ರದಲ್ಲಿದೆ. ಅಡುಗೆ ಮನೆಯಲ್ಲಿ ಬಾಣಲೆಯನ್ನು ಮಗುಚಿ ಹಾಕಿದರೆ ನಕಾರಾತ್ಮಕ ಶಕ್ತಿಯ ಮನೆ ತುಂಬಾ ಹರಿದಾಡುತ್ತದೆಯಂತೆ.
ಈ ಎರಡು ಪಾತ್ರೆಗಳನ್ನು ಅಡುಗೆಮನೆಯಲ್ಲಿ ಮಗುಚಿ ಹಾಕಿದರೆ ಕುಟುಂಬ ಸದಸ್ಯರ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಸಣ್ಣ ಸಣ್ಣ ವಿಚಾರಗಳಿಗೂ ಜಗಳ ಮನಸ್ತಾಪ ಎದುರಾಗುವುದು.
ಅಡುಗೆ ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಎಂಜಲು ಪಾತ್ರೆಗಳೆಲ್ಲವೂ ಸ್ವಚ್ಚವಾಗಿರಬೇಕು. ಎಂಜಲು ಪಾತ್ರೆ ಅಥವಾ ಉಪಯೋಗಿಸಿದ ಪಾತ್ರೆಯನ್ನು ಹಾಗೆಯೇ ಬಿಟ್ಟು ಮಲಗಿದರೆ ಲಕ್ಷ್ಮೀ ಆ ಮನೆಯಲ್ಲಿ ನೆಲೆಸುವುದಿಲ್ಲವಂತೆ.
ವಾಸ್ತು ತಜ್ಞರ ಪ್ರಕಾರ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಸದಾಕಾಲ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು.ಈ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ದನ್ನು ಖಚಿತಪಡಿಸುವುದಿಲ್ಲ.