Kitchen Vastu Tips: ಅಡುಗೆಮನೆಯಲ್ಲಿ ಅಪ್ಪಿತಪ್ಪಿಯೂ ಖಾಲಿಯಾಗದಿರಲಿ ಈ ಪದಾರ್ಥಗಳು

Wed, 25 Nov 2020-12:03 pm,

ಬೆಂಗಳೂರು: ಅಡುಗೆಮನೆಯನ್ನು ಮನೆಯ ಪ್ರಮುಖ ಸ್ಥಳವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಅಡಿಗೆ ಮನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಡುಗೆಮನೆಯಲ್ಲಿ ಏನಾದರೂ ದೋಷವಿದ್ದರೆ, ಅದರ ಪರಿಣಾಮ ಇಡೀ ಮನೆಯಲ್ಲಿ ಕಂಡುಬರುತ್ತದೆ. ವಾಸ್ತು ಶಾಸ್ತ್ರ  (Vastu Shastra) ದಲ್ಲಿ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಈ ವಸ್ತುಗಳು ಖಾಲಿಯಾದಲ್ಲಿ ಅದು ಇಡೀ ಮನೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಹಣ ಮತ್ತು ಗೌರವದ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ.   

ಉಪ್ಪು ಇಲ್ಲದೆ ಆಹಾರವನ್ನು ತಯಾರಿಸುವುದನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆಹಾರ ಮತ್ತು ಅಡುಗೆಮನೆಯ ಪ್ರಮುಖ ಅಂಶವೆಂದರೆ ಉಪ್ಪು. ಹಾಗಾಗಿ ಮನೆಯಲ್ಲಿ ಇನ್ನೇನು ಉಪ್ಪು ಖಾಲಿಯಾಗುತ್ತದೆ ಎನ್ನುವ ಮುನ್ನವೇ ಉಪ್ಪನ್ನು ತರಿಸಿಡಿ.  ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಉಪ್ಪು ಖಾಲಿಯಾಗಿದ್ದರೆ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ. ಇದು ವಾಸ್ತು ದೋಶಕ್ಕೆ ಕಾರಣವಾಗುತ್ತದೆ ಮತ್ತು ಮನೆಯಲ್ಲಿ ಹಣದ ಸಮಸ್ಯೆ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

ಅರಿಶಿನ ಇಲ್ಲದೆ ಆಹಾರಕ್ಕೆ ಬಣ್ಣವೇ ಇರುವುದಿಲ್ಲ. ಅರಿಶಿನ ಕೇವಲ ಬಣ್ಣಕ್ಕಷ್ಟೇ ಅಲ್ಲ. ಉತ್ತಮ ಆರೋಗ್ಯದ ದೃಷ್ಟಿಯಿಂದ ಅದನ್ನು ಆಹಾರದಲ್ಲಿ ಬಳಸಲಾಗುತ್ತದೆ. ಅರಿಶಿನವನ್ನು ಶುಭ ಕಾರ್ಯಗಳಲ್ಲಿಯೂ ಬಳಸಲಾಗುತ್ತದೆ. ಅರಿಶಿನ ಶುಭದ ಸಂಕೇತ, ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅರಿಶಿನ ಇಲ್ಲದಿರುವುದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಇದು ಗುರು ಗ್ರಹದ ದೋಷಕ್ಕೆ ಕಾರಣವಾಗಬಹುದು.. ಮನೆಯಲ್ಲಿ ಅರಿಶಿನ ಖಾಲಿಯಾದರೆ ತೊಂದರೆಗಳು ನಿಮ್ಮನ್ನು ಹುಡುಕಿ ಬರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಅರಿಶಿನ ಖಾಲಿಯಾಗುವ ಮೊದಲೇ ಅದನ್ನು ತರಿಸಿ.

ಅಡುಗೆಮನೆಯಲ್ಲಿನ ಇನ್ನೊಂದು ಪ್ರಮುಖ ಪದಾರ್ಥವೆಂದರೆ ಹಿಟ್ಟು. ಹಿಟ್ಟು ಇಲ್ಲದೆ ಬ್ರೆಡ್ (ಆಹಾರ) ತಯಾರಿಸಲಾಗುವುದಿಲ್ಲ ಮತ್ತು ಆಹಾರ ಇಲ್ಲದೆ ಹೊಟ್ಟೆ ತುಂಬುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಹಿಟ್ಟನ್ನು ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಮನೆಯಲ್ಲಿ ಹಿಟ್ಟು ಸಂಪೂರ್ಣವಾಗಿ ಖಾಲಿಯಾಗುವುದನ್ನು ದಾರಿದ್ರ್ಯ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹಿಟ್ಟು ಖಾಲಿಯಾಗುವುದರಿಂದ ಕುಟುಂಬದ ಗೌರವ ನಷ್ಟವಾಗುತ್ತದೆ ಎಂದು ಹೇಳುತ್ತಾರೆ.

ಅಡುಗೆಮನೆಯಲ್ಲಿ ಅಕ್ಕಿ ಇರುವುದು ಬಹಳ ಮುಖ್ಯ. ಅನೇಕ ಜನರು ಅಕ್ಕಿಯನ್ನು ಲಕ್ಷ್ಮೀ ಸ್ವರೂಪವಾಗಿ ಕಾಣುತ್ತಾರೆ. ಹಾಗಾಗಿಯೇ ಪ್ರತಿಯೊಂದು ಪೂಜೆಯಲ್ಲೂ ಅಕ್ಕಿಯನ್ನು ಬಳಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಅಕ್ಕಿ ಸಂಪೂರ್ಣವಾಗಿ ಖಾಲಿಯಾದಾಗ ಶುಕ್ರ ಗ್ರಹ ದೋಷ ಉಂಟಾಗುತ್ತದೆ. ಇದು ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮನೆಯಲ್ಲಿ ಅಕ್ಕಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link