ಈ ಹಣ್ಣನ್ನು ಖಾಲಿ ಹೊಟ್ಟೆಗೆ ಒಂದು ಪೀಸ್‌ ತಿನ್ನಿ.. ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು! ಒಂದೇ ವಾರದಲ್ಲಿ ಕರಗುತ್ತೆ ನಿಮ್ಮ ಡೊಳ್ಳು ಹೊಟ್ಟೆ

Fri, 10 Jan 2025-7:24 am,

fruits that control blood sugar: ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸ್ವಲ್ಪ ಅಜಾಗರೂಕತೆ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. 

ಕೆಲವು ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ. ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳಿವೆ. 

ಕಿವಿ ಹಣ್ಣು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಿವಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಇತರ ಕಾಯಿಲೆಗಳಿಂದಲೂ ದೇಹವನ್ನು ರಕ್ಷಿಸುತ್ತದೆ. 

ಕಿವಿ ಹಣ್ಣು ಹೊರಗಿನಿಂದ ಚಿಕ್ಕೂ ಹಣ್ಣಿನಂತೆ ಕಾಣುತ್ತದ. ಆದರೆ ಈ ಹಣ್ಣು ಒಳಗಿನಿಂದ ಹಸಿರು ಮತ್ತು ರುಚಿಯಲ್ಲಿ ಸಿಹಿ ಹುಳಿ ಮಿಶ್ರಿತವಾಗಿರುತ್ತದೆ. ಇದನ್ನು ದುಬಾರಿ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 

ಹವಾಮಾನ ಬದಲಾದಂತೆ ಇದರ ದರ ಬದಲಾಗುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಡೆಂಗ್ಯೂನಂತಹ ಮಾರಕ ಕಾಯಿಲೆಯಲ್ಲಿ ಪ್ಲೇಟ್‌ಲೆಟ್‌ಗಳನ್ನು ವೇಗವಾಗಿ ಹೆಚ್ಚಿಸಲು ಸಹ ಇದು ಸಹಕಾರಿಯಾಗಿದೆ.

ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳನ್ನು ಸೇವಿಸಬೇಕು. ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹೀಗಾಗಿ ಕಿವಿ ತಿನ್ನಬಹುದು. ಇದರಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. 

ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್, ಕಡಿಮೆ ಕ್ಯಾಲೋರಿಗಳು ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ. ಇವೆಲ್ಲವೂ ಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್‌ ಮಾಡಲು ಸಹಾಯ ಮಾಡುತ್ತದೆ. 

ಕಿವಿ ಒಂದು ದುಬಾರಿ ಹಣ್ಣು, ಆದರೆ ನೀವು ಅದನ್ನು ವಾರಕ್ಕೆ ಎರಡು-ಮೂರು ಬಾರಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ ಒಂದು ಪೀಸ್‌ ಆದರೂ ತಿನ್ನಿ. ಕಿವಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. 

ಈ ಹಣ್ಣು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮನಸ್ಸು ಶಾಂತವಾಗುತ್ತದೆ ಮತ್ತು ರಾತ್ರಿ ನಿದ್ರೆಯೂ ಸುಧಾರಿಸುತ್ತದೆ. ಕಿವಿ ಹಣ್ಣು ಹಲವು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. 

ಕಿವಿ ಹಣ್ಣು ಲುಟೀನ್ ಮತ್ತು ಫೈಟೊಕೆಮಿಕಲ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗುತ್ತದೆ. ರಕ್ತಹೀನತೆ ರೋಗಿಗಳು ಇದರಿಂದ ಪ್ರಯೋಜನ ಪಡೆಯುತ್ತಾರೆ. 

ಕಿವಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಡೆಂಗ್ಯೂನಂತಹ ಸೋಂಕಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ರೋಗಿಯು ಇದರಿಂದ ಪೊಟ್ಯಾಸಿಯಮ್ ಅನ್ನು ಸಹ ಪಡೆಯುತ್ತಾನೆ. ಇದು ಪ್ಲೇಟ್‌ಲೆಟ್‌ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link