ಟೋಪಿ ಧರಿಸಿ ತಾಯಿಯೊಂದಿಗೆ ನಿಂತಿರುವ ಈ ಬಾಲಕ ಭಾರತದ ಖ್ಯಾತ ಕ್ರಿಕೆಟಿಗ-ಸ್ಟಾರ್ ನಟನ ಅಳಿಯ! 99 ಕೋಟಿ ಒಡೆಯ ಈತ ಯಾರೆಂದು ಗೊತ್ತಾಯ್ತ?
ಕ್ರಿಕೆಟಿಗರು ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಆಸಕ್ತಿ ಹೊಂದಿರುತ್ತಾರೆ. ನಾವಿಂದು ಓರ್ವ ಕ್ರಿಕೆಟಿಗನ ಬಾಲ್ಯದ ಫೋಟೋ ಮತ್ತು ಅದಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳನ್ನು ನಿಮ್ಮ ಮುಂದಿಡಲಿದ್ದೇವೆ.
ಇಲ್ಲೊಂದು ಫೋಟೋ ಇದೆ. ಈ ಫೋಟೋದಲ್ಲಿ, ಒಬ್ಬ ಬಾಲಕ ತನ್ನ ತಾಯಿಯೊಂದಿಗೆ ಕ್ಯಾಪ್ ಧರಿಸಿ ನಿಂತಿರುವುದು ಕಾಣಬಹುದು. ಈತ ಟೀಂ ಇಂಡಿಯಾದ ಸ್ಟಾರ್ ಆಟಗಾರ, ಜೊತೆಗೆ ಈತ ಮದುವೆಯಾಗಿರೋದು ಬಾಲಿವುಡ್’ನ ಖ್ಯಾತನೋರ್ವನ ಮಗಳನ್ನು.
ಈ ಬಾಲಕ ಬೇರಾರು ಅಲ್ಲ, ಕೆಎಲ್ ರಾಹುಲ್. ತಾಯಿಯೊಂದಿಗೆ ಇರುವ ಈ ಚಿತ್ರದಲ್ಲಿ ರಾಹುಲ್ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.
ಕೆಎಲ್ ರಾಹುಲ್ ತಮ್ಮ ತಾಯಿ ರಾಜೇಶ್ವರಿ ಜೊತೆ ನಿಂತು ಫೋಟೋಗೆ ಫೋಸ್ ನೀಡುತ್ತಿದ್ದಾರೆ, ಇನ್ನು ರಾಹುಲ್ ಅವರ ತಾಯಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಒಂದೊಮ್ಮೆ ತಮ್ಮ ಟ್ವೀಟ್’ನಲ್ಲಿ ಕೆಎಲ್ ರಾಹುಲ್ “ಸೂಪರ್ ಮಾಮ್” ಎಂದೂ ಬರೆದುಕೊಂಡಿದ್ದರು.
ಅಂದಹಾಗೆ ಖ್ಯಾತ ಟಿವಿ ಶೋನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, “ನಾನು ಇಷ್ಟೊಂದು ಯಶಸ್ವಿ ಕ್ರಿಕೆಟಿಗನಾಗಿದ್ದರೂ, ಎಂಜಿನಿಯರಿಂಗ್ ಸರ್ಟಿಫಿಕೇಟ್ ಇಲ್ಲದಿರುವುದಕ್ಕೆ ನನ್ನ ತಾಯಿ ಅಸಮಾಧಾನಗೊಂಡಿದ್ದಾರೆ, ಗೋಡೆ ಮೇಲೆ ನೇತುಹಾಕಲು ಎಂಜಿನಿಯರಿಂಗ್ ಪ್ರಮಾಣಪತ್ರವಿಲ್ಲ ಎಂದು ಹೇಳುತ್ತಿದ್ದಾರೆ, ನನ್ನ ತಾಯಿ ಯಾವಾಗಲೂ ನಾನು ಎಂಜಿನಿಯರ್ ಆಗಬೇಕೆಂದು ಬಯಸಿದ್ದರು” ಎಂದಿದ್ದರು.