ಅಥಿಯಾ ಶೆಟ್ಟಿಗೂ ಮುನ್ನ ಈ 4 ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಕೆಎಲ್ ರಾಹುಲ್!? ಅದರಲ್ಲಿ ಒಬ್ರು ಸೌತ್ʼನ ಅತಿ ಶ್ರೀಮಂತ ನಟಿ
ಕ್ರಿಕೆಟಿಗ ಕೆಎಲ್ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರಿಗೂ ಮುನ್ನ ಕೆಲ ಚೆಲುವೆಯರ ಜೊತೆ ಡೇಟಿಂಗ್ ಮಾಡಿದ್ದರು ಎಂಬ ವದಂತಿಗಳು ಇವೆ. ಆ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಪಂಜಾಬ್ ಚಲನಚಿತ್ರೋದ್ಯಮ ನಟಿ ಸೋನಮ್ ಬಜ್ವಾ ಮತ್ತು ಕೆ ಎಲ್ ರಾಹುಲ್ ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿಕೊಳ್ಳುವ ಮೂಲಕ ಈ ಸುದ್ದಿಗೆ ಪುಷ್ಠಿ ನೀಡಿದಂತಾಗಿತ್ತು. ಆದರೆ ಇದು ವೈರಲ್ ಸುದ್ದಿಯಷ್ಟೇ ಎಂಬುದು ಅನೇಕರ ಮಾತು.
ಆಕಾಂಕ್ಷ ರಂಜನ್ ಕಪೂರ್ ಪ್ರಸಿದ್ಧ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ಈಕೆಯ ಜೊತೆ ರಾಹುಲ್ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ ಈ ಸಂಬಂಧ ತೀರಾ ಗೌಪ್ಯವಾಗಿಟ್ಟಿದ್ದರು. ಕೆಲ ಸಮಯದ ಬಳಿಕ ಈ ಜೋಡಿ ದೂರವಾಗಿತ್ತು.
2008ರಲ್ಲಿ ಬಿಡುಗಡೆಗೊಂಡ 'ಜನ್ನತ್' ಚಿತ್ರದ ಮೂಲಕ ಸದ್ದು ಮಾಡಿದ್ದ ಸೋನಂ ಚೌಹಾಣ್ʼಗೆ ಕ್ರಿಕೆಟ್ ಅಂದ್ರೆ ತುಂಬಾ ಪ್ರೀತಿ. ಈ ನಟಿ ಒಂದೊಮ್ಮೆ ರಾಹುಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಬರೆದು ಶೇರ್ ಮಾಡಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ನಡುವೆ ಸಂಬಂಧವಿದೆ ಎಂದು ಜನ ಮಾತನಾಡಿಕೊಳ್ಳಲು ಪ್ರಾರಂಭಿಸಿದರು.
ಇನ್ನು ದಕ್ಷಿಣ ಭಾರತದ ನಟಿ ನಿಧಿ ಅಗರ್‌ವಾಲ್ ಜೊತೆಯೂ ಕೆ ಎಲ್ ರಾಹುಲ್ ಹೆಸರು ತಳುಕು ಹಾಕಿತ್ತು. ಆದರೆ ಇವರಿಬ್ಬರು ಸ್ನೇಹಿತರು ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಿ, ನಂತರ ಈ ವದಂತಿಗೆ ಬ್ರೇಕ್ ಹಾಕಿದ್ದರು.