ಮೂಲೆಗುಂಪಾಗಿದ್ದ ಈ ಆಟಗಾರನಿಗೆ RCB ಕ್ಯಾಪ್ಟನ್ಸಿ: ʼನನ್ನ ಸಹೋದರʼ ಎಂದೇ ಕೊಹ್ಲಿ ಕರೆಯುತ್ತಿದ್ದ ಈತನಿಗೆ ಕೊನೆಗೂ ಖುಲಾಯಿಸಿದ ಅದೃಷ್ಟ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18 ನೇ ಋತುವಿನ ಆರಂಭಕ್ಕೆ ಈಗ 5-6 ತಿಂಗಳಷ್ಟೇ ಬಾಕಿ ಉಳಿದಿವೆ. ಆದರೆ ಈ ಬಾರಿ ಐಪಿಎಲ್ʼಗೂ ಮುನ್ನ ಮೆಗಾ ಹರಾಜು ಕೂಡ ನಡೆಯಲಿದ್ದು, ಇದೇ ಕಾರಣದಿಂದ ಚರ್ಚೆ ಈಗಾಗಲೇ ತೀವ್ರಗೊಂಡಿದೆ.
ಇಂದು ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮಾತನಾಡುತ್ತೇವೆ. IPL 2025 ರಲ್ಲಿ RCB ಯಲ್ಲಿ ಬಹಳಷ್ಟು ಬದಲಾವಣೆಗಳು ನಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೆಲ್ಲದರ ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ, ಕೆಎಲ್ ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ಟಾರ್ ಆಟಗಾರ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಹುಲ್ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡಲಿದೆ ಎಂದು ಈಗಾಗಲೇ ಕೆಲ ಮೂಲಗಳು ಹೇಳಿವೆ. ಇದೇ ಕಾರಣದಿಂದ ಆರ್ ಸಿ ಬಿ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿ, ರಾಹುಲ್ʼಗೆ ನಾಯಕತ್ವ ನೀಡಬಹುದು ಎನ್ನಲಾಗಿದೆ.
KL ರಾಹುಲ್ ಮೊದಲು RCB ತಂಡದ ಭಾಗವಾಗಿದ್ದರು. ಈ ಅವಧಿಯಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿತ್ತು. ಇನ್ನೊಂದೆಡೆ ಐಪಿಎಲ್ 2025 ರಲ್ಲಿ ವಿರಾಟ್ ಕೊಹ್ಲಿಯನ್ನು RCB ತಂಡದ ಉಪನಾಯಕನನ್ನಾಗಿ ಮಾಡುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ 2025 ರ ಮೊದಲು ನಡೆಯಲಿರುವ ಮೆಗಾ ಹರಾಜನ್ನು ಗಮನದಲ್ಲಿಟ್ಟುಕೊಂಡು, RCB ತನ್ನ ತಂಡದಲ್ಲಿ ಕೆಲವೇ ಆಟಗಾರರನ್ನು ಉಳಿಸಿಕೊಳ್ಳಲಿದೆ. ಇದರಲ್ಲಿ ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್ ಮತ್ತು ವಿಲ್ ಜಾಕ್ವೆಸ್ ಹೆಸರು ಸೇರಿದೆ. ಇದರ ಹೊರತಾಗಿ ವಿರಾಟ್ ಕೊಹ್ಲಿಯನ್ನೂ ಉಳಿಸಿಕೊಳ್ಳುವುದು ಖಚಿತ ಎಂದು ಪರಿಗಣಿಸಲಾಗಿದೆ.