ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಯಾರು? ವಿರಾಟ್, ಹಾರ್ದಿಕ್, ರೋಹಿತ್’ರನ್ನೇ ಮೀರಿಸಿದ ಆಟಗಾರ ಈತ
)
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅಥವಾ ರಿಷಬ್ ಪಂತ್ ಐಪಿಎಲ್’ನ ನಡೆಯುತ್ತಿರುವ ಋತುವಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರರಲ್ಲ.
)
IPL 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರ ಬೇರಾರು ಅಲ್ಲ, ಕನ್ನಡಿಗ ಕೆಎಲ್ ರಾಹುಲ್.
)
ಬಲಗೈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮತ್ತು ಭಾರತೀಯ ತಂಡದ ಉಪನಾಯಕ ಕೆಎಲ್ ರಾಹುಲ್ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರರಾಗಿದ್ದಾರೆ. 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 17 ಕೋಟಿ ರೂ. ನೀಡಿ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿದೆ.
ವಿವಿಧ ವರದಿಗಳ ಪ್ರಕಾರ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಅವರು ತಮ್ಮ ಫ್ರಾಂಚೈಸಿಗಳೊಂದಿಗೆ ಒಪ್ಪಂದದಿಂದ ವಾರ್ಷಿಕವಾಗಿ 16 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ, ಈ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದ 2023-2024 ಆಟಗಾರರ ಒಪ್ಪಂದಗಳ ಪಟ್ಟಿಯ ಪ್ರಕಾರ, ಕೆಎಲ್ ರಾಹುಲ್ ಅವರನ್ನು ಗ್ರೇಡ್ ಬಿ ಯಿಂದ ಗ್ರೇಡ್ ಎ ಗೆ ಬಡ್ತಿ ಮಾಡಲಾಗಿದೆ. ಈ ಮೂಲಕ ವಾರ್ಷಿಕ ರೂ 5 ಕೋಟಿ ವೇತನಕ್ಕೆ ಅರ್ಹವಾಗಿರುತ್ತಾರೆ.
BCCI ಮತ್ತು IPL ಫ್ರಾಂಚೈಸಿ (ಲಕ್ನೋ ಸೂಪರ್ ಜೈಂಟ್ಸ್) ಜೊತೆಗಿನ ಒಪ್ಪಂದಗಳ ಹೊರತಾಗಿ, KL ರಾಹುಲ್ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್’ಗಳಿಂದ ಗಣನೀಯ ಪ್ರಮಾಣದ ಹಣವನ್ನು ಗಳಿಸುತ್ತಾರೆ.