ಆತಿಯಾ ಶೆಟ್ಟಿ ಬೋಲ್ಡ್ ಪೋಟೋ ನೋಡಿ ರೊಮ್ಯಾಂಟಿಕ್ ಕಾಮೆಂಟ್ ಮಾಡಿದ ಕೆ ಎಲ್ ರಾಹುಲ್..!

Fri, 05 Feb 2021-3:42 pm,

ಇತ್ತೀಚೆಗೆ ಆತಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು.  ಈ ಫೋಟೋದಲ್ಲಿ ಆತಿಯಾ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಆತಿಯಾ ಥೈ ಸ್ಲಿಟ್ ಉಡುಪನ್ನು ಧರಿಸಿದ್ದು ಮೋಹಕವಾಗಿ ಕಂಗೊಳಿಸುತ್ತಿದ್ದಾರೆ.  

ಆತಿಯಾ ಈ ಫೋಟೋಗೆ ಕೆ ಎಲ್ ರಾಹುಲ್ ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಕೆ ಎಲ್ ರಾಹುಲ್ ಇಮೋಜಿಯನ್ನು ಬಳಸಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.   

ಇತ್ತೀಚೆಗಷ್ಟೇ ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಡಿನ್ನರ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.  ರಾಬಿನ್ ಉತ್ತಪ್ಪ ಅವರ ಪತ್ನಿಶೀತಲ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.  

ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಇನ್ಸ್ಟಾಗ್ರಾಮ್ ನಲ್ಲಿ ಪರಸ್ಪರರ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿರುತ್ತಾರೆ.

ಕೆ ಎಲ್ ರಾಹುಲ್ ಜನ್ಮದಿನದಂದು ಆತಿಯಾ ರಾಹುಲ್ ಗೆ ಶುಭಕೋರುವುದರೊಂದಿಗೆ my person ಎಂದು ಕೂಡಾ ಬರೆದಿದ್ದರು. ಈ ಮೂಲಕ ಅವರಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದ್ದರು.

ಇನ್ನು ಆತಿಯಾ ಜನ್ಮದಿನದಂದು ರಾಹುಲ್ ಕೂಡಾ ಆತಿಯಾಗೆ ವಿಶ್ ಮಾಡಿದ್ದರು. ಈ ವೇಳೆ ರಾಹುಲ್ ಮತ್ತು ಆತಿಯಾ ಜೊತೆಗಿರುವ ಫೋಟೋವೊಂದನ್ನು ಕೂಡಾ ಶೇರ್ ಮಾಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link