ಓದಿದ್ದು 8ನೇ ಕ್ಲಾಸ್, ಆಗಿದ್ದು ಟೀಂ ಇಂಡಿಯಾದ ಸ್ಟಾರ್ ಬೌಲರ್... 200 ರೂಗೆ ಕ್ರಿಕೆಟ್ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್ ಮಾಡಿ
ಅತಿ ಕಡಿಮೆ ಸಮಯದಲ್ಲೇ ಖ್ಯಾತಿ ಪಡೆದು ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಕೆಲವೇ ಕೆಲ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ʼನೊಂದಿಗೆ ವೃತ್ತಿಜೀವನ ಆರಂಭಿಸಿದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಶ್ವಕ್ರಿಕೆಟ್ ಲೋಕವೇ ಬೆರಗುಗೊಳಿಸುವಂತೆ ಆಟವಾಡಿದ್ದರು.
ಅಂದಹಾಗೆ ಈ ವರದಿಯಲ್ಲಿ ಹಾರ್ದಿಕ್ ಪಾಂಡ್ಯ ನಡೆದುಬಂದ ಹಾದಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನವು ಹೋರಾಟಗಳಿಂದ ತುಂಬಿತ್ತು. ತಂದೆ ಹಿಮಾಂಶು ಪಾಂಡ್ಯ ಸಣ್ಣ ಕಾರು ಹಣಕಾಸು ವ್ಯವಹಾರದ ಮಾಲೀಕರಾಗಿದ್ದರು. ಸ್ವತಃ ಕ್ರಿಕೆಟ್ ಅಭಿಮಾನಿಯಾಗಿರುವ ಅವರು ತಮ್ಮ ಇಬ್ಬರು ಪುತ್ರರಲ್ಲಿ ಅಡಗಿರುವ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು.
ಕ್ರಿಕೆಟ್ ಪರಿಕರಗಳನ್ನು ಖರೀದಿಸಲು ಹಾರ್ದಿಕ್ ಬಳಿ ಹಣವಿರಲಿಲ್ಲ. ಇದೇ ಕಾರಣದಿಂದ ಆರಂಭಿಕ ದಿನಗಳಲ್ಲಿ ಹಾರ್ದಿಕ್ ಟೆನಿಸ್ ಬಾಲ್ʼನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್, ಕೇವಲ 200 ರೂ.ಗೋಸ್ಕರ್ ತಮ್ಮ ಪಕ್ಕದ ಹಳ್ಳಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದರು.
ಹಣಕಾಸಿನ ಮುಗ್ಗಟ್ಟಿನಿಂದಾಗಿ ಹಾರ್ದಿಕ್ ಮತ್ತು ಕೃನಾಲ್ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ ಸರಿಯಾಗಿ ತಿನ್ನಲು ಅನ್ನವಿಲ್ಲದ ಕಾರಣ, ಮ್ಯಾಗಿ ತಿಂದು ಜೀವನ ಸಾಗಿಸುತ್ತಿದ್ದರು.
ಈ ವಿಷಯವನ್ನು ಹಾರ್ದಿಕ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. "ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟಕ್ಕೆ ಮ್ಯಾಗಿ ಸೇವಿಸಿ ದಿನ ಕಳೆಯುತ್ತಿದ್ದೆ. ಕ್ರಿಕೆಟ್ ಆಡಲು ಹೋಗಬೇಕಾದಾಗ 5ರಿಂದ 10 ರೂಪಾಯಿ ಇರುತ್ತಿತ್ತು. ಆ ಹಣದಲ್ಲಿ ಮ್ಯಾಗಿ ಖರೀದಿಸಿ ತಿನ್ನುತ್ತಿದ್ದೆವು" ಎಂದಿದ್ದರು.
2013 ರಲ್ಲಿ ಮುಂಬೈ ವಿರುದ್ಧದ ಟಿ20 ಪಂದ್ಯದ ಮೂಲಕ ದೇಶೀಯ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದರು. ಆ ನಂತರ, ಹಾರ್ದಿಕ್ ಹಿಂತಿರುಗಿ ನೋಡಲಿಲ್ಲ, ಐಪಿಎಲ್ ಅವರಿಗೆ ದೊಡ್ಡ ತಿರುವು ನೀಡಿತ್ತು ಎಂದರೂ ತಪ್ಪಾಗಲ್ಲ. ಮುಂಬೈ ಇಂಡಿಯನ್ಸ್ 2015 ರ ಐಪಿಎಲ್ʼನಲ್ಲಿ ಮೊದಲ ಬಾರಿಗೆ ಹಾರ್ದಿಕ್ʼನನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಆ ಬಳಿಕ ಯಶಸ್ಸಿನ ಮೆಟ್ಟಿಲುಗಳನ್ನೇ ಏರಿದ್ದ ಹಾರ್ದಿಕ್ ಇದೀಗ 91 ಕೋಟಿ ರೂ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಟ್ರೋಫಿಯಲ್ಲಿ ಭಾರತ ಅದ್ಭುತ ಜಯ ಗಳಿಸಲು ಹಾರ್ದಿಕ್ ಪಾಂಡ್ಯ ಕೊಡುಗೆಯೂ ಅಪಾರವಾಗಿತ್ತು.