ವಿಷ್ಣುವರ್ಧನ್ ಪುತ್ರಿ ಕೀರ್ತಿ,ಅಳಿಯ ಅನಿರುದ್ ಚಿರಪರಿಚಿತ !ದೂರವೇ ಉಳಿದಿರುವ ಇನ್ನೊಬ್ಬ ಮಗಳು-ಅಳಿಯ ಇವರೇ ನೋಡಿ!
ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮ ಅಗಲಿ ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ತಮ್ಮ ಅಭಿಮಾನಿಗಳ ಮನದಲ್ಲಿ ಆರ ನೆನಪು ಅಚ್ಚಳಿಯದೆ ಉಳಿದಿದೆ.
ವಿಷ್ಣವರ್ಧನ್ ಮತ್ತು ಪತ್ನಿ ಭಾರತಿಗೆ ಸ್ವಂತ ಮಕ್ಕಳಿಲ್ಲ. ಈ ಕಾರಣದಿಂದ ಈ ದಂಪತಿ ಇಬ್ಬರು ಮಕ್ಕಳನ್ನು ದತ್ತು ಪಡೆಯುತ್ತಾರೆ. ಇವರ ಉದಾತ್ತ ಭಾವವೆಂದರೆ ಇಬ್ಬರೂ ಹೆಣ್ಣು ಮಕ್ಕಳನ್ನೇ ದತ್ತು ಪಡೆಯುತ್ತಾರೆ.
ದತ್ತು ಮಕ್ಕಳಾದರೂ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ ಧಾರೆ ಎರೆದಿದ್ದಾರೆ ಎಂದರೆ ತಪ್ಪಲ್ಲ. ಈ ಇಬ್ಬರು ಮಕ್ಕಳ ಪೈಕಿ ಒಬ್ಬರು ಕೀರ್ತಿ.ಕೀರ್ತಿ ಸಾಮಾನ್ಯವಾಗಿ ತಾಯಿ ಭಾರತಿಯ ನೆರಳಿನಂತೆ ಜೊತೆಯಲ್ಲಿಯೇ ನಡೆಯುತ್ತಾರೆ.ಕೀರ್ತಿ ಪತಿ ಖ್ಯಾತ ನಟ ಅನಿರುದ್.
ಬಹುತೇಕರು ವಿಷ್ಣುವರ್ಧನ್ ಗೆ ಒಬ್ಬರೇ ಪುತ್ರಿ ಅಂದುಕೊಂಡಿದ್ದಾರೆ.ಯಾಕೆಂದರೆ ವಿಷ್ಣುವರ್ಧನ್ ಇನ್ನೊಬ್ಬ ಪುತ್ರಿ ಚಂದನ ಕುಟುಂಬದ ಅಷ್ಟಾಗಿ ಮಾಧ್ಯಮಗಳ ಕಣ್ಣಿಗೆ ಬೀಳುವುದಿಲ್ಲ.
ಚಂದನ ಬಿಸ್ ನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿದ್ದು, ಬಿಸ ನೆಸ್ ಬಗ್ಗೆಯೇ ಸಂಪೂರ್ಣ ಫೋಕಸ್ಡ್ ಆಗಿದ್ದಾರೆ. ಇನ್ನು ಇವರಾಗಲೀ ಇವರ ಪತಿಯಾಗಲೀ ಸಿನಿಮಾ ಜಗತ್ತಿನಿಂದ ದೂರವೇ ಉಳಿದಿದ್ದಾರೆ.
ಚಂದನಾ ತನ್ನ ಕುಟುಂಬದೊಂದಿಗೆ ಬಹುತೇಕ ವಿದೇಶಗಳಲ್ಲಿಯೇ ಇರುತ್ತಾರೆ ಎಂದು ಹೇಳಲಾಗುತ್ತದೆ.ಆದರೆ ಕುಟುಂಬದ ಸಮಾರಂಭಗಳಲ್ಲಿಮಾತ್ರ ತಪ್ಪದೇ ಭಾಗಿಯಾಗುತ್ತಾರೆಯಂತೆ.