ಹಿರಿಯ ನಾಗರಿಕರಿಗೆ ಸಿಗಲಿದೆ ಬಂಪರ್ ಆಫರ್ : ಈ ಸ್ಪೆಷಲ್ ಸ್ಕೀಮ್ ನ ಲಾಭ ತಿಳಿಯಿರಿ
ಎಸ್‌ಬಿಐನ (SBI) ವಿಶೇಷ ಎಫ್‌ಡಿ ಯೋಜನೆ 'ವಿ ಕೇರ್' ನಲ್ಲಿ (We Care), ಹಿರಿಯ ನಾಗರಿಕರು 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ 0.30 ಶೇಕಡಾ ಹೆಚ್ಚು ಬಡ್ಡಿ ಪಡೆಯುತ್ತಾರೆ. ಎಸ್‌ಬಿಐ ಪ್ರಸ್ತುತ 5 ವರ್ಷಗಳ ಎಫ್‌ಡಿಗಳ ಮೇಲೆ ಸಾಮಾನ್ಯ ಜನರಿಗೆ 5.4% ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಲ್ಲಿ ಠೇವಣಿ ಮಾಡಿದರೆ ವಾರ್ಷಿಕ 6.20 ಬಡ್ಡಿ ಲಭ್ಯವಿರುತ್ತದೆ. ವಿ ಕೇರ್ ಯೋಜನೆಯಲ್ಲಿ, ಹಿರಿಯ ನಾಗರಿಕರು 0.50 ಶೇಕಡಾ ಹೆಚ್ಚು ಬಡ್ಡಿಯ ಜೊತೆಗೆ 0.30 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ತನ್ನ ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಠೇವಣಿಗಳ ಮೇಲೆ 0.75 ಶೇಕಡಾ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 5 ವರ್ಷಗಳಿಗಿಂತ ಹೆಚ್ಚು ಕಾಲ ಠೇವಣಿ ಇಟ್ಟರೆ, ಅವರು ಎಫ್‌ಡಿಗೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ. ಸಾಮಾನ್ಯ ಜನರು 5 ವರ್ಷಗಳ ಎಫ್‌ಡಿ ಮೇಲೆ 5.50 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ, 0.50 ಪ್ರತಿಶತ ಹಿರಿಯ ನಾಗರಿಕರ ಪ್ರಯೋಜನ ಮತ್ತು 0.25 ಶೇಕಡಾ ವಿಶೇಷ ಯೋಜನೆ ಅಂದರೆ ಒಟ್ಟು 0.75 ರಷ್ಟು ಹೆಚ್ಚುವರಿ ಬಡ್ಡಿ ಪಡೆಯುತ್ತಾರೆ.
ಐಸಿಐಸಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ ಯೋಜನೆ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯಲ್ಲಿ, ಹಿರಿಯ ನಾಗರಿಕರು 0.80 ಶೇಕಡಾ ಹೆಚ್ಚು ಬಡ್ಡಿಯನ್ನು ಪಡೆಯುತ್ತಾರೆ. ಇದರಲ್ಲಿ, ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷಗಳಿಗಿಂತ ಹೆಚ್ಚು ಮತ್ತು 10 ವರ್ಷಗಳವರೆಗಿನ ಠೇವಣಿಗಳ ಮೇಲೆ ವಾರ್ಷಿಕವಾಗಿ 6.30 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಈ ಬ್ಯಾಂಕಿನಲ್ಲಿ, ಸಾಮಾನ್ಯ ಜನರು 5 ವರ್ಷಗಳಿಗಿಂತ ಹೆಚ್ಚಿನ ಠೇವಣಿಗಳಿಗೆ 5.50 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಠೇವಣಿ ಇಟ್ಟರೆ, 0.50 ಶೇಕಡಾ ಹೆಚ್ಚು ಬಡ್ಡಿಯ ಜೊತೆಗೆ, ಹಿರಿಯ ನಾಗರಿಕರಿಗೆ 0.30 ಶೇಕಡಾ ಹೆಚ್ಚುವರಿ ಬಡ್ಡಿ ಸಿಗುತ್ತದೆ.
ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರೀಕರ ವಿಶೇಷ ಯೋಜನೆಯಲ್ಲಿ ಠೇವಣಿಗಳ ಮೇಲೆ 1.0 ಶೇಕಡಾ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಲ್ಲಿ 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಮತ್ತು 10 ವರ್ಷಗಳವರೆಗೆ ಠೇವಣಿ ಇರಿಸಿದರೆ, ವಾರ್ಷಿಕ 6.25 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ.