ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಅಲ್ಲ, 67, 535 ಕೋಟಿ ಮೌಲ್ಯದ ಪತಂಜಲಿಯ ನಿಜವಾದ ಮಾಲೀಕ ಇವರೇ !ಯೋಗ ಗುರುವೇ ಬಿಚ್ಚಿಟ್ಟ ಸತ್ಯ
ಸಾವಿರಾರು ಕೋಟಿ ಮೌಲ್ಯದ ಪತಂಜಲಿಯ ನಿಜವಾದ ಮಾಲೀಕ ಬಾಬಾ ರಾಮ್‌ದೇವ್ ಎಂದೇ ಅನೇಕರು ತಿಳಿದಿದ್ದಾರೆ. ಆದರೆ ಇತ್ತೀಚೆಗೆ ವೀಡಿಯೊದ ಮೂಲಕ ಪತಂಜಲಿ ಆಯುರ್ವೇದದ ನಿಜವಾದ ಮಾಲೀಕರು ಯಾರು ಎನ್ನುವುದನ್ನು ಹೇಳಲಾಗಿದೆ.
ಪತಂಜಲಿ ಆಹಾರ ಮತ್ತು ಸೌಂದರ್ಯ ಉತ್ಪನ್ನಗಳಲ್ಲದೆ, ಯೋಗ ಗ್ರಾಮ್, ನಿರಾಮಯಂ, ಪತಂಜಲಿ ಯೋಗಪೀಠ, ಆಚಾರ್ಯಕುಲಂ, ಪತಂಜಲಿ ವಿಶ್ವವಿದ್ಯಾಲಯ ಸೇರಿದಂತೆ ದೇಶಾದ್ಯಂತ 100 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದೆ. ಪತಂಜಲಿ ಫುಡ್ಸ್ ನ ಮಾರುಕಟ್ಟೆ ಕ್ಯಾಪ್ 67,535 ಕೋಟಿ.
ಬಾಬಾ ರಾಮದೇವ್ ಅಥವಾ ಆಚಾರ್ಯ ಬಾಲಕೃಷ್ಣ ಅವರು ಲಕ್ಷಾಂತರ ಕೋಟಿ ಮೌಲ್ಯದ ಪತಂಜಲಿಯ ಸಾಮ್ರಾಜ್ಯದ ನಿಜವಾದ ಒಡೆಯರಲ್ಲ ಎಂದು ಬಾಬಾ ರಾಮ್ ದೇವ್ ಸಂವಾದದಲ್ಲಿ ಹೇಳಿದ್ದಾರೆ. ಈ ಕಂಪನಿಯ ನಿಜವಾದ ಮಾಲೀಕರು ಇಡೀ ದೇಶ ಮತ್ತು ದೇಶದ ಜನರು ಎಂದು ಯೋಗಗುರು ಹೇಳಿದರು. ಪತಂಜಲಿಯ ಸಂಪೂರ್ಣ ಸಾಮ್ರಾಜ್ಯ ದೇಶ ಮತ್ತು ಜನತೆಗೆ ಸೇರಿದ್ದು ಎಂದಿದ್ದಾರೆ.
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು 1995 ರಲ್ಲಿ ಪತಂಜಲಿಯನ್ನು ಕಂಪನಿಯಾಗಿ ನೋಂದಾಯಿಸಿದರು. ಕಂಪನಿಯ ನೋಂದಣಿಗೆ ಅವರ ಬಳಿ ಹಣವಿರಲಿಲ್ಲ. ಇದಕ್ಕೆ ಬೇಕಾಗಿದ್ದ ಮೊತ್ತ ಕೇವಲ 13,000 ರೂ. ಆದರೆ ಇಬ್ಬರ ಬಳಿ ಇದ್ದದ್ದು ಕೇವಲ 3,500 ರೂ. ಆಗ ಸ್ನೇಹಿತರಿಂದ ಸಾಲ ಪಡೆದು ನೋಂದಣಿ ಮೊತ್ತ ಪಾವತಿಸಿದ್ದಾರೆ.
1995 ರಲ್ಲಿ ದಿವ್ಯ ಯೋಗ ಟ್ರಸ್ಟ್, 2006 ರಲ್ಲಿ ಪತಂಜಲಿ ಯೋಗಪೀಠವನ್ನು ಪ್ರಾರಂಭಿಸಿದರು. ಗುಂಪಿನ ಅಡಿಯಲ್ಲಿ ಸುಮಾರು 34 ಕಂಪನಿಗಳು ಮತ್ತು ಮೂರು ಟ್ರಸ್ಟ್‌ಗಳಿವೆ. ಪತಂಜಲಿ ಸೌಂದರ್ಯವರ್ಧಕಗಳು, ಆಯುರ್ವೇದ ಔಷಧಗಳು, ವೈಯಕ್ತಿಕ ಆರೈಕೆ ಮತ್ತು ಆಹಾರ ಉತ್ಪನ್ನಗಳನ್ನು ತಯಾರಿಸುತ್ತದೆ.