ಬಾತ್ ರೂಮಿನಲ್ಲೇ ಹೆಚ್ಚಾಗಿ Heart Attack ಯಾಕಾಗುತ್ತದೆ ತಿಳಿದಿದೆಯಾ?

Sun, 01 Aug 2021-3:08 pm,

ಬಾತ್ ರೂಂನಲ್ಲಿ ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿವೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಜನರು  ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಾರೆ.

ಬಾತ್ ರೂಂನಲ್ಲಿ ಹೃದಯಾಘಾತ ಹೆಚ್ಚಾಗಿ  ಯಾಕೆ ಸಂಭವಿಸುತ್ತದೆ? ಹೌದು ಈ ಅಪಾಯವನ್ನು ತಪ್ಪಿಸಬೇಕಾದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕು. , ಅಮೇರಿಕನ್ ಸಂಸ್ಥೆ ಎನ್‌ಸಿಬಿಐ ವರದಿಯ ಪ್ರಕಾರ, 11% ಕ್ಕಿಂತ ಹೆಚ್ಚು ಹೃದಯಾಘಾತ ಪ್ರಕರಣಗಳು ಬಾತ್ ರೂಂನಲ್ಲಿ ಲ್ಲಿ ಸಂಭವಿಸುತ್ತವೆ. 

ಸ್ನಾನ ಮಾಡುವಾಗಲೂ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀರನ್ನು ಬಳಸದಿದ್ದಾಗ, ಈ ಅಪಾಯ ಹೆಚ್ಚಾಗುತ್ತದೆ. ಉದಾಹರಣೆಗೆ, ಚಳಿಗಾಲದಲ್ಲಿ ತುಂಬಾ ತಣ್ಣೀರು ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದ ತಾಪಮಾನಕ್ಕೆ ಅನುಗುಣವಾಗಿಯೇ ನೀರನ್ನು ಬಳಸಬೇಕು. ಮತ್ತು  ಆತುರ ಆತುರವಾಗಿ   ಸ್ನಾನ ಮಾಡುವುದನ್ನು ತಪ್ಪಿಸಬೇಕು. ಹೀಗಾದಾಗ ಸ್ಟ್ರೆಸ್ ಜಾಸ್ತಿಯಾಗುತ್ತದೆ. ಹೃದಯಾಘಾತದ ಅಪಾಯವು ಹೆಚ್ಚುತ್ತದೆ.   

ಈಗಾಗಲೇ ಹೃದಯದ ತೊಂದರೆ ಇರುವವರು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಇನ್ನೊಂದೆಡೆ, ಮಲಬದ್ಧತೆಯ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛಗೊಳಿಸಲು ತುಂಬಾ ಪ್ರೆಶರ್ ಹಾಕಬೇಕಾಗುತ್ತದೆ. ಹಾಗೆ ಮಾಡುವುದರಿಂದ ವ್ಯಕ್ತಿಯ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ಆದ್ದರಿಂದ, ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.  

Healthline.com ಪ್ರಕಾರ, ಹೃದಯದಲ್ಲಿ ಎಲೆಕ್ಟ್ರಿಕಲ್ ಸಮಸ್ಯೆ ಇದ್ದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಅನಿಯಮಿತ ಹೃದಯ ಬಡಿತದಿಂದಲೂ ಹೀಗಾಗುತ್ತದೆ. ಸ್ನಾನ ಮಾಡುವಾಗ ಅಥವಾ ಫ್ರೆಶ್ ಆಗುವಾಗ ಈ ರೀತಿಯ ಅಸಮರ್ಪಕ ಕ್ರಿಯೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದೆಲ್ಲದರ ಹಿಂದೆ ಒಂದು ದೊಡ್ಡ ಕಾರಣವೆಂದರೆ ನೀವು ತೆಗೆದುಕೊಳ್ಳುತ್ತಿರುವ ಸ್ರೆಸ್ಸ್  ಆಗಿರಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link