Summer Fruit : ಈ ಐದು ಕಾರಣಗಳಿಗಾಗಿ ಖರ್ಬೂಜ ಹಣ್ಣು ತಿನ್ನಲೇಬೇಕು

Wed, 24 Mar 2021-12:18 pm,

ಕಲ್ಲಂಗಡಿಯಂತೆಯೇ, ಖರ್ಬೂಜ  (Musk melon) ಕೂಡಾ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಈ ಹಣ್ಣಲ್ಲಿ ಫ್ಯಾಟ್ ಕಂಟೆಂಟ್ ಕೂಡಾ ಇಲ್ಲ. ಖರ್ಬೂಜ ತಿಂದ ನಂತರ, ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಮಧ್ಯೆ ಮಧ್ಯೆ ಕುರುಕಲು ತಿಂಡಿಗಳನ್ನು ತಿನಬೇಕು ಅನ್ನಿಸುವುದಿಲ್ಲ. ಇದರಿಂದಾಗಿ ಅನಗತ್ಯವಾಗಿ ಕ್ಯಾಲೊರಿಗಳು ನಮ್ಮ ದೇಹ ಸೇರುವುದು ತಪ್ಪುತ್ತದೆ. ಇದರಿಂದಾಗಿ ದೇಹ ತೂಕ ಕೂಡಾ ನಿಯಂತ್ರಣದಲ್ಲಿರುತ್ತದೆ.  

ಕ್ಯಾರೆಟಿನಂತೆ ಖರ್ಬೂಜ ಹಣ್ಣಿನಲ್ಲಿಯೂ  ಬೀಟಾ-ಕ್ಯಾರೋಟಿನ್ ಇರುತ್ತದೆ. ಈ ಕಾರಣದಿಂದಾಗಿಯೇ ಖರ್ಬೂಜ ಕೇಸರಿ ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣುಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಖರ್ಬೂಜ ಹಣ್ಣನ್ನು ಹೆಚ್ಚಾಗಿ ತಿನ್ನಬೇಕು.  

 ಅಧಿಕ ರಕ್ತದೊತ್ತಡದ ರೋಗಿಗಳಿಗೆ ಖರ್ಬೂಜ ಹಣ್ಣು ಅತ್ಯಂತ ಪ್ರಯೋಜನಕಾರಿ. ಖರ್ಬೂಜದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಮ್ ಇರುತ್ತದೆ. ಇದು ದೇಹದಲ್ಲಿ ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.  ಅಲ್ಲದೆ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಹವಾಮಾನ ಬದಲಾವಣೆಯಿಂದ ಬಾಧಿಸುವ ಶೀತ-ಕೆಮ್ಮು ಮತ್ತು ಮೂಗು ಕಟ್ಟುವ ಸಮಸ್ಯೆಯನ್ನು ಖರ್ಬೂಜ ಹಣ್ಣು ನಿವಾರಿಸುತ್ತದೆ. ಬೇಕಾದರೆ ಸಲಾಡ್ ಅಥವಾ ಮೊಸರಿನೊಂದಿಗೆ ಸೇರಿಸಿ ಖರ್ಬೂಜದ ಬೀಜಗಳನ್ನು ಸೇವಿಸಬಹುದು. ಇದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಖರ್ಬೂಜದಲ್ಲಿ ಕಂಡುಬರುವ ಪೊಟ್ಯಾಶಿಯಮ್ ಮೆದುಳಿನಲ್ಲಿ ಆಮ್ಲಜನಕದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವು ಸರಿಯಾದ ಪ್ರಮಾಣದಲ್ಲಿ ಮೆದುಳನ್ನು ತಲುಪಿದಾಗ, ಮೆದುಳು ಶಾಂತವಾಗಿರುತ್ತದೆ. ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ. ವಿಟಮಿನ್ ಸಿ ಹೇರಳವಗಿರುವುದರಿಂದ ಖರ್ಬೂಜ ಬಿಳಿ ರಕ್ತ ಕಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link