ಹೃದ್ರೋಗಕ್ಕೆ ಕಾರಣವಾಗುವ ಈ ಐದು ಅಂಶಗಳು ನಿಮಗೆ ತಿಳಿದಿರಲಿ

Tue, 02 Mar 2021-4:54 pm,

ಒತ್ತಡ ನಮ್ಮೆಲ್ಲರ ಜೀವನದ ಒಂದು ಭಾಗವಾಗಿದೆ. ವೃತ್ತಿಪರ ಜೀವನವಾಗಲೀ ವೈಯಕ್ತಿಕ ಜೀವನವಾಗಲಿ ಒತ್ತಡ ಅಥವಾ ಸ್ಟ್ರೆಸ್ ಇದ್ದೇ ಇರುತ್ತದೆ. ಒತ್ತಡ, ಮಾನಸಿಕವಾಗಿದ್ದರೂ ಅದು ನಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಬ್ಲಡ್ ಪ್ರೆಶರ್ ಹೆಚ್ಚಾದರೆ, ಹೃದಯದ  ಅಪಧಮನಿಗಳು ಕಿರಿದಾಗಲು ಪ್ರಾರಂಭವಾಗುತ್ತದೆ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.  

ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರ ಅಪಧಮನಿಗಳಲ್ಲಿ ಕೊಬ್ಬಿನಂಶವು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳು ಬ್ಲಾಕ್ ಆಗಿದ್ದರೆ, ಅಥವಾ ಹಾನಿಗೊಳಗಾಗಿದ್ದರೆ, ಇದರಿಂದಾಗಿ ಹೃದಯಾಘಾತದ ಅಪಾಯವಿದೆ. ಇದಲ್ಲದೆ ಅಧಿಕ ದೇಹ ತೂಕ ಬೊಜ್ಜು, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮತ್ತು ಮಧುಮೇಹದಂತಹ ರೋಗಗಳಿಗೂ ಕಾರಣವಾಗಬಹುದು.  ಈ ಎಲ್ಲ ವಿಷಯಗಳು ಹೃದ್ರೋಗಕ್ಕೆ ಕಾರಣವಾಗಿವೆ.  

ಹಣ್ಣುಗಳು, ತರಕಾರಿಗಳು, ಧಾನ್ಯಗಳಂತಹ ಆರೋಗ್ಯಕರ ವಸ್ತುಗಳ ಬದಲು, ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಫ್ಯಾಟ್, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಅಧಿಕವಾಗಿರುವ ಆಹಾರಗಳನ್ನೇ ಸೇವಿಸಿದರೆ, ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುವುದು ಮಾತ್ರವಲ್ಲ, ಹೃದಯದ ಬ್ಲಾಕೇಜ್ ಗೂ ಕಾರಣವಾಗಬಹುದು.   

ನೀವು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೆ ಅಂದರೆ ಕುಳಿತ  ಜಾಗದಲ್ಲೇ ಇದ್ದು ಕೆಲಸ ಮಾಡಿಕೊಂಡು ಇರುವುದಾದರೆ ಇದು ಮುಂದೆ ಅಪಾಯವನ್ನು ತಂದೊಡ್ಡಬಹುದು. ದಿನಕ್ಕೆ 9 ರಿಂದ 10 ಗಂಟೆಗಳ ಕಾಲ ಕುಳಿತಲ್ಲೇ ಕುಳಿತಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೃದ್ರೋಗದಿಂದ ನಮ್ಮನ್ನು ಕಾಪಾಡಿಕೊಳ್ಳಲು, ವ್ಯಾಯಾಮ, ತಾಲೀಮು ಅಥವಾ ಯೋಗ ಮಾಡಲೇಬೇಕು. ದೈಹಿಕವಾಗಿ ಸಕ್ರಿಯವಾಗಿಲ್ಲದ ಜನರಲ್ಲಿ, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವು ಇತರ ಜನರಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ.

ಧೂಮಪಾನವು ಹೃದ್ರೋಗದ ಅಪಾಯವನ್ನು 3 ಪಟ್ಟು ಹೆಚ್ಚಿಸುತ್ತದೆ. ಹೆಚ್ಚು ಆಲ್ಕೊಹಾಲ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವೂ ಹೆಚ್ಚುತ್ತದೆ.  ನೀವು ಈಗಾಗಲೇ ಹೃದ್ರೋಗವನ್ನು ಹೊಂದಿದ್ದರೆ, ಆಲ್ಕೊಹಾಲ್ ಸೇವನೆಯನ್ನು ಇಂದೇ ಬಿಟ್ಟು ಬಿಡಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link