Health Tips: ಶುಂಠಿ ಟೀ ಮಾಡುವ ಸರಿಯಾದ ವಿಧಾನ ತಿಳಿಯಿರಿ, ಇಲ್ಲದಿದ್ದರೆ ದೇಹಕ್ಕೆ ಹಾನಿ!
ಚಳಿಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ನೀವು ಬಿಸಿ ಬಿಸಿ ಶುಂಠಿ ಚಹಾವನ್ನು ಸೇವಿಸಿದ್ರೆ ನಿಮ್ಮ ದಿನ ಚೆನ್ನಾಗಿರುತ್ತದೆ. ಈ ಚಹಾವು ರುಚಿಯ ಜೊತೆಗೆ ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ
ಈ ಶುಂಠಿ ಚಹಾವು ಉರಿಯೂತ ಮತ್ತು ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳನ್ನು ನಮ್ಮ ದೇಹದಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇಂದು ನಾವು ಈ ಶುಂಠಿ ಚಹಾವನ್ನು ಹೇಗೆ ತಯಾರಿಸಬೇಕೆಂದು ನಿಮಗೆ ತಿಳಿಸಿಕೊಡಲಿದ್ದೇವೆ.
ಶುಂಠಿಯೊಂದಿಗೆ ಬಿಸಿ ಚಹಾವನ್ನು ತಯಾರಿಸಲು ನಿಮಗೆ ಹಾಲು, ನೀರು, ಚಹಾ ಎಲೆಗಳು, ಶುಂಠಿ ಮತ್ತು ಸಕ್ಕರೆ ಬೇಕಾಗುತ್ತದೆ.
ಇದು ಆರೋಗ್ಯಕರ ಚಹಾವಾಗಿದೆ, ಇದನ್ನು ಕುಡಿದ ನಂತರ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ ಮತ್ತು ಗಂಟಲಿನಿಂದಲೂ ಪರಿಹಾರ ಪಡೆಯುತ್ತೀರಿ. ಈ ಟೀ ಮಾಡುವಾಗ ಸಕ್ಕರೆಯ ಬದಲು ಬೆಲ್ಲವನ್ನೂ ಬಳಸುವುದು ಉತ್ತಮ.
ಈ ಚಹಾವನ್ನು ತಯಾರಿಸಲು ಮೊದಲು ಬಾಣಲೆಯಲ್ಲಿ ನೀರನ್ನು ಸೇರಿಸಿ ಮತ್ತು ಅದಕ್ಕೆ ಶುಂಠಿಯನ್ನು ಹಾಕಿ. ಸ್ವಲ್ಪ ಸಮಯ ಕುದಿದ ನಂತರ ಅದರಲ್ಲಿ ಬೆಲ್ಲ ಮತ್ತು ಟೀ ಎಲೆಗಳನ್ನು ಹಾಕಿ ಕುದಿಯಲು ಬಿಡಿ.. ಹಾಲು ಬೇಕಾದ್ರೆ ಸೇರಿಸಿ, ನಂತರ ಬಿಸಿಬಿಸಿ ಶುಂಠಿ ಚಹಾ ಸೇವಿಸಿ ಖುಷಿಪಡಿ.