Vastu Tips: ವಾಸ್ತು ದೋಷಗಳನ್ನು ನಿವಾರಿಸುವ ಬಿಳಿ ಎಕ್ಕ ಗಿಡ

Sat, 30 Mar 2024-4:25 pm,

ಬಿಳಿ ಎಕ್ಕದ ಗಿಡವನ್ನು ಭಕ್ತಿಯಿಂದ ಪೂಜಿಸಿದರೆ ಹಲವಾರು ಧಾರ್ಮಿಕ ಪ್ರಯೋಜನಗಳಿವೆ. ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ‌ 

ಗಣಪತಿ, ಈಶ್ವರ ಮತ್ತು ಆಂಜನೇಯ ದೇವರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತರಾಗುತ್ತೀರಿ.

‌ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಬೇಕು. ಇದು ಬಹಳ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

ಬಿಳಿ ಎಕ್ಕದ ಗಿಡ ಗಣಪತಿಗೆ ಬಹಳ ಪ್ರಿಯವಾಗಿದೆ. ಗಣಪತಿಗೆ‌ ಬಿಳಿಯ ಎಕ್ಕದ ಹೂವನ್ನು ಮಾಲೆ ಮಾಡಿ ಅದರ ಅರ್ಪಿಸಿದರೆ, ನಮ್ಮ ಕಾರ್ಯಗಳಲ್ಲಿ ಬರುವ ವಿಘ್ನಗಳನ್ನು ನಿವಾರಣೆ ಪಡೆಯಬಹುದು.

ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ‌ ‌ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link