LPG cylinder ಬುಕ್ ಮಾಡುವ ಮೊದಲು ಈ 4 ನಿಯಮಗಳನ್ನು ತಪ್ಪದೇ ತಿಳಿಯಿರಿ

Mon, 02 Nov 2020-10:35 am,

ಬೆಂಗಳೂರು: ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವ ಮೊದಲು ಈ ಸುದ್ದಿ ನಿಮಗೆ ಮುಖ್ಯವಾಗಿದೆ. ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ವಿತರಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಬದಲಾಯಿಸಿವೆ. ಪಾರದರ್ಶಕತೆ ಹೆಚ್ಚಿಸಲು ಮತ್ತು ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡಲು, ತೈಲ ಕಂಪನಿಗಳು ನವೆಂಬರ್ 1 ರಿಂದ ಡೆಲಿವರಿ ದೃಢೀಕರಣ ಕೋಡ್ (Delivery Authentication Code-DAC) ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲು ನಿರ್ಧರಿಸಿವೆ.

ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಗ್ರಾಹಕರಿಗೆ ಸೂಚನೆ ಹೊಸ ಸಿಲಿಂಡರ್ ವಿತರಣಾ ನೀತಿಯಲ್ಲಿ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಿಸದ ಗ್ರಾಹಕರಿಗೆ ತೊಂದರೆಗಳು ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ ಸಿಲಿಂಡರ್‌ಗಳ ವಿತರಣೆಯನ್ನು ನಿಲ್ಲಿಸಬಹುದು. ಹಾಗಾಗಿ ಎಲ್ಲಾ ಗ್ರಾಹಕರಿಗೆ ತೈಲ ಕಂಪನಿಗಳು ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಸೂಚಿಸಲಾಗಿದೆ. ಆದ್ದರಿಂದ ಅವರು ಸಿಲಿಂಡರ್ ವಿತರಣೆಯನ್ನು ತೆಗೆದುಕೊಳ್ಳುವಲ್ಲಿ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ. ಆದಾಗ್ಯೂ, ಈ ನಿಯಮವು ವಾಣಿಜ್ಯ (Commercial) ಸಿಲಿಂಡರ್‌ಗಳಿಗೆ ಅನ್ವಯಿಸುವುದಿಲ್ಲ.

ನೀವು ಈವರೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಲ್ಲದಿದ್ದರೆ ತಕ್ಷಣ ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಅನಿಲ ವಿತರಣೆಗೆ ಒಟಿಪಿ ಕೋಡ್ ಬರುತ್ತದೆ. ನಿಮ್ಮ ಕೋಡ್ ಅನ್ನು ತಿಳಿಸಿದ ನಂತರವೇ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಲಾಗುತ್ತದೆ.

ಹೊಸ ನಿಯಮಗಳ ಪ್ರಕಾರ ನೀವು ಈಗ ನಿಮ್ಮ ಮನೆಯಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬುಕ್ ಮಾಡಿದಾಗ ನಿಮಗೆ ಕಂಪನಿಯಿಂದ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಈ ಒಟಿಪಿ ಸಂಖ್ಯೆಯನ್ನು ನೀವು ಹೇಳಿದರೆ ಮಾತ್ರ, ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಗ್ಯಾಸ್ ಸಿಲಿಂಡರ್‌ನ ಬ್ಲಾಕ್ ಮಾರ್ಕೆಟಿಂಗ್ ತಪ್ಪಿಸಬಹುದು ಎಂದು ಎಂದು ಗ್ಯಾಸ್ ಕಂಪನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ದೇಶಾದ್ಯಂತ ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಇಂಡೇನ್ ಎಲ್‌ಪಿಜಿ ರೀಫಿಲ್ ಬುಕಿಂಗ್ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. 7718955555 ಗೆ ಕರೆ ಮಾಡಿ ನಿಮ್ಮ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ವಾರದಲ್ಲಿ ಏಳು ದಿನ ಬುಕ್ ಮಾಡಬಹುದು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ ಸಿಲಿಂಡರ್ ಬುಕಿಂಗ್ ವ್ಯವಸ್ಥೆಯು ಟೆಲಿಕಾಂ ಸರ್ಕಲ್-ನಿರ್ದಿಷ್ಟ ಫೋನ್ ಸಂಖ್ಯೆಗಳನ್ನು ಆಧರಿಸಿದೆ, ಇದನ್ನು 31.10.2020 ರ ರಾತ್ರಿಯಿಂದ ಮುಚ್ಚಲಾಗುತ್ತಿದೆ. ನವೆಂಬರ್ 1 ರಿಂದ 7718955555 ಸಂಖ್ಯೆಯ ಮೂಲಕ ಮಾತ್ರ ಸಿಲಿಂಡರ್ ಅನ್ನು ಕಾಯ್ದಿರಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link