ಹಳೆ ಕಾರು ಖರೀದಿಸುವ ಮುನ್ನ ಈ ಐದು ವಿಷಯಗಳು ತಿಳಿದಿರಲಿ

Sun, 08 Aug 2021-3:21 pm,

ಸೆಕೆಂಡ್ ಹ್ಯಾಂಡ್ ಕಾರಿಗೆ ಸಾಲ ಪಡೆಯುವುದು ಕೂಡ ಈಗ ಸುಲಭ. ಆದ್ದರಿಂದ, ನೀವು ಹಳೆಯ ಕಾರುಗಳಲ್ಲಿ  ಹೈ ಸೆಗ್ಮೆಂಟ್ ಕಾರನ್ನು ಖರೀದಿಸುವ ಬಗ್ಗೆ ಕೂಡ ಯೋಜಿಸಬಹುದು. 5 ವರ್ಷಗಳವರೆಗಿನ pre owned ಕಾರು ಖರೀದಿಸುವುದಾದರೆ ಸುಲಭವಾಗಿ ಸಾಲ ಪಡೆಯಬಹುದು.  4-6 ಲಕ್ಷ ರೂಗಳ ಬಜೆಟ್ ನಿಮಗೆ ಹ್ಯಾಚ್ ಬ್ಯಾಕ್, ಕಾಂಪ್ಯಾಕ್ಟ್ ಎಸ್ ಯುವಿ, ಕಾಂಪ್ಯಾಕ್ಟ್ ಸೆಡಾನ್ ಅನ್ನು ಖರೀದಿಸಬಹುದು. 

ನೀವು ಯಾವ ರೀತಿಯ ಹಳೆಯ ಕಾರನ್ನು ಖರೀದಿಸಲು ಬಯಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಇದು ಹಲವು ಪ್ಯಾರಾ ಮೀಟರ್ ಗಳನ್ನೂ  ಹೊಂದಿದೆ. ಬಾಡಿ ಟೈಪ್, ಫ್ಯುಯೆಲ್ ಟೈಪ್ ನಿಂದ ಹಿಡಿದು, ಪರ್ಸನಲ್, ಫ್ಯಾಮಿಲಿ, ಅಡ್ವೆಂಚರ್ ಟ್ರಿಪ್,  ಹೀಗೆ ಯಾವ ರೀತಿಯ ಕಾರು ಬೇಕು ಎನ್ನುವುದನ್ನು ನಿರ್ಧರಿಸಬೇಕು.   

ಬಜೆಟ್ ಮತ್ತು ಕಾರನ್ನು ನಿರ್ಧರಿಸಿದ ನಂತರ, ಎಷ್ಟು ಹಳೆಯ ಕಾರನ್ನು ಖರೀದಿಸಬೇಕು ಎಂಬುದನ್ನು ಈಗ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, 3-5 ಲಕ್ಷ ರೂಪಾಯಿಗಳ ಬಜೆಟ್ ನಲ್ಲಿ, 2-3 ವರ್ಷದೊಳಗಿನ ಹ್ಯಾಚ್ ಬ್ಯಾಕ್ ಮತ್ತು 4-5 ವರ್ಷದೊಳಗಿನ ಸೆಡಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಮೆಟ್ರೋ ನಗರಗಳು ಭವಿಷ್ಯದಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳ ಬಳಕೆಯನ್ನು ನಿಷೇಧಿಸಬಹುದಾದ್ದರಿಂದ, ಡೀಸೆಲ್ ಕಾರುಗಳನ್ನು ಖರೀದಿಸುವುದನ್ನು ಆದಷ್ಟು ತಪ್ಪಿಸಿ.   

ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಪ್ರತಿಯೊಂದು ಸೆಕೆಂಡ್ ಹ್ಯಾಂಡ್ ಕಾರು ಒಬ್ಬ ವ್ಯಕ್ತಿಗೆ ಸೇರಿದ್ದಾಗಿದ್ದು, ಈ ಮಾರಾಟಗಾರರಲ್ಲಿ ಹೆಚ್ಚಿನವರು ಖರೀದಿದಾರರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಾರೆ. ಇದರ ಪ್ರಯೋಜನವೆಂದರೆ, ಯಾವುದೇ ಏಜೆಂಟ್ ಅಥವಾ ಮೂರನೇ ವ್ಯಕ್ತಿ ಇರುವುದಿಲ್ಲವಾದ್ದರಿಂದ ಹಣವನ್ನು ಉಳಿಸಬಹುದು.

ನೀವು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಹೋದಾಗಲೆಲ್ಲ, ನೀವು ದಾಖಲೆಗಳು ಸಂಪೂರ್ಣ ಮತ್ತು ಅಪ್ಡೇಟೆಡ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಅಗತ್ಯವಿರುವ ದಾಖಲೆಗಳಲ್ಲಿ ಆರ್‌ಸಿ ವರ್ಗಾವಣೆ, ವಿಮೆಯ ಹೆಸರು ಬದಲಾವಣೆ, ನಕಲಿ ಕೀಗಳು ಸೇರಿವೆ. ಕಾರನ್ನು ಯಾವುದೇ ಬ್ಯಾಂಕ್‌ಗೆ ಅಡಮಾನ ಇಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link