ಈ ರಾಶಿಯವರು ಕೊನೆಯುಸಿರಿರುವವರೆಗೂ ಸ್ನೇಹವನ್ನು ಕಾಪಾಡುತ್ತಾರೆ ..!
ಮೇಷ ರಾಶಿ : ಈ ರಾಶಿಯ ಜನರು ಯಾರೊಂದಿಗೂ ಸ್ನೇಹ ಬೆಳೆಸಲು ಹಿಂಜರಿಯುವುದಿಲ್ಲ. ಅವರು ತಮ್ಮ ಕಡೆಯಿಂದ ಸ್ನೇಹದ ಹಸ್ತವನ್ನು ಚಾಚುತ್ತಾರೆ. ಅವರ ದೃಷ್ಟಿಯಲ್ಲಿ, ಸ್ನೇಹದಲ್ಲಿ ಯಾವುದೇ ಹುಳುಕು ಹುಡುಕಬಾರದು. ಸ್ನೇಹಿತರನ್ನು ನಂಬಬೇಕು.
ವೃಷಭ ರಾಶಿ : ವೃಷಭ ರಾಶಿಯ ಸ್ನೇಹದಲ್ಲಿ ಕ್ಷಮೆ ಮುಖ್ಯ ಎಂದು ನಂಬುತ್ತಾರೆ. ಸ್ನೇಹಿತ ತಪ್ಪು ಮಾಡಿದರೂ ಅದನ್ನು ದೊಡ್ಡದು ಮಾಡದೇ ಕ್ಷಮಿಸಬೇಕುನಬ ಭಾವನೆ ಇವರದ್ದು. ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಇವರು ಹಿಂಜರಿಯುವುದಿಲ್ಲ.
ಮಿಥುನ ರಾಶಿ -ಯಾರ ಜೊತೆಯೇ ಆಗಲಿ ಸ್ನೇಹ ಸಂಬಂಧ ಬೆಳೆಸುವ ಮುನ್ನ ಅವರ ಸರಿಯಾಗಿ ತಿಳಿದುಕೊಳ್ಳುತ್ತಾರೆ. ಇವರನ್ನು ಸಾವಿರ ಜನ ಸ್ನೇಹಿತ ಎಂದುಕೊಳ್ಳಬಹುದು. ಆದರೆ, ಇವರು ಬೆರಳೆಣಿಕೆಯ ಜನರಲ್ಲಿ ಮಾತ್ರ ನಂಬಿಕೆ ಇಡುತ್ತಾರೆ.
ಕರ್ಕ ರಾಶಿ - ಸ್ನೇಹ ಸಂಬಂಧದಲ್ಲಿ ಸಮರ್ಪಣಾ ಭಾವ ಇದ್ದಾಗ ಮಾತ್ರ ಸಾಧ್ಯ, ಈ ರಾಶಿಚಕ್ರದ ಜನರೊಂದಿಗೆ ಸ್ನೇಹ ಬೆಳೆಸಬಹುದು. ಇಲ್ಲದಿದ್ದರೆ ಪರಿಚಯವು ಎಂದಿಗೂ ಸ್ನೇಹವಾಗಿ ಬದಲಾಗುವುದಿಲ್ಲ.
ಸಿಂಹ - ಸಿಂಹ ರಾಶಿಯವರು ಸ್ನೇಹವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಾರೆ ಮತ್ತು ಅದಕ್ಕಾಗಿಯೇ ಅವರು ಸ್ನೇಹಿತರ ನಡುವೆ ಕುಳಿತು ಹರಟೆ ಹೊಡೆಯಲು ಇಷ್ಟಪಡುತ್ತಾರೆ.
ಕನ್ಯಾ ರಾಶಿ - ಈ ರಾಶಿಯ ಜನರು ಸ್ನೇಹಿತರಿಲ್ಲದೆ ಜೀವನವೇ ಶೂನ್ಯ ಎಂದು ಭಾವಿಸುತ್ತಾರೆ. ಕೆಲವು ವಿಷಯಗಳನ್ನು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಬಹುದು ಎಂಬ ನಂಬಿಕೆ ಇವರದ್ದು.
ತುಲಾ - ಅವರು ಸ್ನೇಹದ ಅರ್ಥವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಜೀವನದಲ್ಲಿ ನೆಮ್ಮದಿ ಕಾಣಬೇಕಾದರೆ ಸ್ನೇಹ ಅಗತ್ಯ ಎಂದು ನಂಬುತ್ತಾರೆ.
ವೃಶ್ಚಿಕ ರಾಶಿ - ಇವರ ದೃಷ್ಟಿಯಲ್ಲಿ ಸ್ನೇಹವೇ ಜೀವನದ ಬಹುಮುಖ್ಯ ಸಂಬಂಧ. ಇವರು ಸ್ನೇಹದ ವಿಚಾರದಲ್ಲಿ ತುಂಬಾ ಭಾವುಕರಾಗಿರುತ್ತಾರೆ, ಸ್ನೇಹಕ್ಕಾಗಿ ಸಾಕಷ್ಟು ತ್ಯಾಗಕ್ಕೂ ಸಿದ್ಧರಿರುತ್ತಾರೆ.
ಧನು ರಾಶಿ - ಧನು ರಾಶಿಯ ಜನರು ಬಹಳ ಯೋಚಿಸಿ ಸ್ನೇಹ ಬೆಳೆಸುತ್ತಾರೆ. ಒಮ್ಮೆ ಸ್ನೇಹವನ್ನು ಮಾಡಿದರೆ ಆ ಸ್ನೇಹವನ್ನು ಕೊನೆ ತನಕ ಉಳಿಸಿಕೊಳ್ಳುತ್ತಾರೆ.
ಮಕರ ರಾಶಿ - ಈ ರಾಶಿಯವರು ಸಿಕ್ಕ ಸಿಕ್ಕವರನ್ನೆಲಾ ಸ್ನೇಹಿತರೆಂದು ಒಪ್ಪುವುದಿಲ್ಲ. ಮೊದಲು ಸಮಾಜದಲ್ಲಿ ಬುದ್ಧಿವಂತರನ್ನು ಹುಡುಕುತ್ತಾರೆ ಮತ್ತು ನಂತರ ಅವರ ಕಡೆಗೆ ಸ್ನೇಹದ ಹಸ್ತವನ್ನು ಚಾಚುತ್ತಾರೆ.
ಕುಂಭ ರಾಶಿ - ಸ್ನೇಹ ಎನ್ನುವುದು ಅವರಿಗೆ ಸಾಮಾನ್ಯವಾದ ಮಾತಲ್ಲ. ಇವರು ಬಹಳ ಯೋಚಿಸಿದ ನಂತರವೇ ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಒಮ್ಮೆ ಯಾರ ಜೊತೆಗಾದರೂ ಸ್ನೇಹ ಬೆಳೆಸಿದರೆ ನಂತರ ಅದನ್ನು ಸುಲಭವಾಗಿ ಮುರಿಯುವುದಿಲ್ಲ.
ಮೀನ ರಾಶಿ - ಈ ರಾಶಿಯ ಜನರು ತುಂಬಾ ಬುದ್ಧಿವಂತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುತ್ತಾರೆ. ಸೈದ್ಧಾಂತಿಕವಾಗಿ ಪ್ರಬುದ್ಧ ವ್ಯಕ್ತಿ ಸ್ನೇಹಿತನಾದರೆ, ಅವನು ಕಾಲಕಾಲಕ್ಕೆ ಸಲಹೆಯನ್ನು ಸಹ ನೀಡುತ್ತಾನೆ ಎಂಬ ಭಾವನೆ ಇವರದ್ದು.