ಹಾವಿನಂತೆ ಮಾನವ ದೇಹವೂ ವಿಷವನ್ನು ಉತ್ಪಾದಿಸಬಹುದು, ಸಂಪೂರ್ಣ ಮಾಹಿತಿ ಇಲ್ಲಿದೆ

Mon, 01 Nov 2021-5:27 pm,

ವಿಷಕನ್ಯೆಯರ  ಬಗ್ಗೆ ಹೇಳುವುದಾದರೆ, ನಂಬಿಕೆಗಳ ಆಧಾರದ ಮೇಲೆ, ಅವರು ತಮ್ಮನ್ನು ವಿಷಕಾರಿ ಮಾಡಲು  ಹಾವುಗಳ ವಿಷವನ್ನು ತೆಗೆದುಕೊಳ್ಳುತ್ತಿದ್ದರು.  ಆದರೆ RD.com ನ ವರದಿಯ ಪ್ರಕಾರ, ಮಾನವ ದೇಹವು ಇದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಅಂದರೆ,ಮನುಷ್ಯ ಹೊರಗಿನಿಂದ ವಿಷವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.  ಬದಲಿಗೆ ಅವನು ತನ್ನ ದೇಹದಲ್ಲಿ ವಿಷವನ್ನು ಉಂಟುಮಾಡಬಹುದು. 

ಜಪಾನಿನ ವಿಜ್ಞಾನಿಗಳು ನಡೆಸಿದ ಸಂಶೋಧನೆಯು ಮಾನವನೊಳಗೆ ವಿಷವನ್ನು ಉಂಟುಮಾಡುವ ಲಾಲಾರಸ ಗ್ರಂಥಿಗಳಿವೆ ಎಂದು ಬಹಿರಂಗಪಡಿಸಿದೆ. ಪ್ರಪಂಚದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಇರುವುಡು ಅದೇ ಲಾಲಾರಸ ಗ್ರಂಥಿಗಳು. ಆದರೆ ಮಾನವರಲ್ಲಿ ಹೊಂದಿಕೊಳ್ಳುವ ಜೀನ್‌ಗಳಿಂದಾಗಿ ಲಾಲಾರಸ ಗ್ರಂಥಿಗಳು ವಿಷಕಾರಿಯಲ್ಲದ ಜೀವಿಗಳಂತೆ ವಿಕಸನಗೊಂಡಿವೆ. 

ಮಾನವನ ಲಾಲಾರಸ ಗ್ರಂಥಿಗಳು ವಿಷಕಾರಿ ಪ್ರಾಣಿಗಳಂತೆ ಬೆಳವಣಿಗೆಯಾಗಿದ್ದರೆ, ಅವನು ಕೂಡ ಸುಲಭವಾಗಿ ವಿಷವನ್ನು ಮಾಡಬಹುದು

ಮಾನವನ ದೇಹದಲ್ಲಿ ಅನೇಕ ರೀತಿಯ ವಿಷಕಾರಿ ಪದಾರ್ಥಗಳು ತಯಾರಾಗುತ್ತವೆ ಮತ್ತು ಅವನು ಅವುಗಳನ್ನು ಅನೇಕ ರೀತಿಯಲ್ಲಿ ಬಿಡುಗಡೆ ಮಾಡಿದರೂ, ವಿಷದ ಅಗತ್ಯತೆಯ ಕೊರತೆಯಿಂದಾಗಿ, ಅವನ ಜೊಲ್ಲು ಗ್ರಂಥಿಗಳು ವಿಷವಿಲ್ಲದ ಜೀವಿಗಳಂತೆ ಆಗುತ್ತವೆ.

ಮಾನವರು ಮತ್ತು ವಿಷಕಾರಿ ಜೀವಿಗಳ ಲಾಲಾರಸ ಗ್ರಂಥಿಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ ನಿರ್ದಿಷ್ಟ ಪ್ರೋಟೀನಿನ ರೂಪಾಂತರ. ಮಾನವ ದೇಹದಲ್ಲಿ, ಲಾಲಾರಸದಿಂದ ಬಿಡುಗಡೆಯಾದ ಪ್ರೊಟೀನ್ ಕಲ್ಲಿಕ್ರೀನ್ಸ್ ರೂಪಾಂತರಗೊಳ್ಳುವುದಿಲ್ಲ  ಅದು ವಿಷಕಾರಿ ಜೀವಿಗಳಲ್ಲಿ ರೂಪಾಂತರಗೊಳ್ಳುತ್ತದೆ. ದೇಹದಲ್ಲಿ ಮಾರಣಾಂತಿಕ ವಿಷವನ್ನು ತಯಾರಿಸಲು, ಈ ಪ್ರೋಟೀನ್ ಅನ್ನು ರೂಪಾಂತರಿಸುವುದು ಅವಶ್ಯಕ. ಏಕೆಂದರೆ ಇದು ವಿಷವನ್ನು ತಯಾರಿಸುವ ಸಂಪೂರ್ಣ ವ್ಯವಸ್ಥೆಯನ್ನು ಸಿದ್ಧಪಡಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link