Knowledge Story: ಎಲ್ಲಕ್ಕಿಂತ ಹೆಚ್ಚು ಕಾಲ ಬದುಕುತ್ತಾರಂತೆ ಈ ಪ್ರದೇಶದ ಜನರು, ನಮ್ಮ ರಾಜ್ಯ ಇದರಲ್ಲಿದೆಯಾ?

Sun, 17 Oct 2021-4:13 pm,

1. ಕೇರಳದ ಜನರು ಎಲ್ಲಕ್ಕಿಂತ ಹೆಚ್ಚು ಬದುಕುತ್ತಾರಂತೆ (Highest Avarage Age State In India) - ನೀತಿ ಆಯೋಗದ (Niti Aayog) 2010 ರಿಂದ 2014ರ ವರದಿಯ ಪ್ರಕಾರ ಕೇರಳದ ಜನರು ಅತಿ ಹೆಚ್ಚು ಕಾಲ ಬದುಕುತ್ತಾರೆ ಎನ್ನಲಾಗಿದೆ. ಇಲ್ಲಿನ ಜನರ ಸರಾಸರಿ ಆಯಸ್ಸು 74.9 ವರ್ಷಗಳಾಗಿದೆ.

2. ಎರಡನೇ ಸ್ಥಾನದಲ್ಲಿ ದೆಹಲಿ ಇದೆ - ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರದಲ್ಲಿಯೂ ಸಹ ಜನರ ಸರಾಸರಿ ವಯಸ್ಸು ತುಂಬಾ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಮಹಿಳೆಯರ ಸರಾಸರಿ ಆಯಸ್ಸು 74.7 ಮತ್ತು ಪುರುಷರು ಸರಾಸರಿ 73.2 ವರ್ಷ ಬದುಕುತ್ತಾರೆ.

3.ಮೂರನೇ ಸ್ಥಾನದಲ್ಲಿ ಭೂಮಿಯ ಸ್ವರ್ಗ - ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆ ಮತ್ತು ಪುರುಷರ ಸರಾಸರಿ ಆಯಸ್ಸು ಕ್ರಮವಾಗಿ 74.9 ಹಾಗೂ 72.6 ವರ್ಷಗಳಾಗಿದೆ.   

4. ನಾಲ್ಕನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶ - ಇಲ್ಲಿನ ಮಹಿಳೆಯರ ಸರಾಸರಿ ವಯಸ್ಸು 74.1 ಹಾಗೂ ಪುರುಷರ ಸರಾಸರಿ ವಯಸ್ಸು 71.6 ಆಗಿದೆ.

5. ಐದನೇ ಸ್ಥಾನದಲ್ಲಿ ಮಹಾರಾಷ್ಟ್ರ - ದೇಶದಲ್ಲಿ ಅತಿ ಹೆಚ್ಚು ಸರಾಸರಿ ವಯಸ್ಸು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಐದನೇ ಸ್ಥಾನದಲ್ಲಿದೆ. ಇಲ್ಲಿ ಮಹಿಳೆಯರು 73.6 ವರ್ಷಗಳು ಮತ್ತು ಪುರುಷರು ಸರಾಸರಿ 71.6 ವರ್ಷಗಳು ಬದುಕುತ್ತಾರೆ. ಅಸ್ಸಾಂ (Lowest Average Age State In India) ರಾಜ್ಯ ದೇಶದಲ್ಲಿ ಅತಿ ಕಡಿಮೆ ಸರಾಸರಿ ವಯಸ್ಸು ಹೊಂದಿರುವ ರಾಜ್ಯವಾಗಿದ್ದು ಅಲ್ಲಿ ಜನರ ಸರಾಸರಿ ಆಯಸ್ಸು 63.9 ವರ್ಷಗಳಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link