ಛಲ ಅಂದ್ರೆ ಹೀಗಿರಬೇಕು... 23 ಸರ್ಜರಿ.. 4 ವರ್ಷ ವ್ಹೀಲ್‌ಚೇರ್‌ಗೆ ಸೀಮಿತ.. ಸತ್ತು ಬದುಕುಳಿದ ವ್ಯಕ್ತಿ ಈಗ ಸ್ಟಾರ್..!

Sat, 27 Jul 2024-8:21 pm,

ತಮಿಳು ಸಿನಿರಂಗದ ಪ್ರತಿಭಾನ್ವಿತ ನಟರಲ್ಲಿ ಚಿಯಾನ್‌ ವಿಕ್ರಮ್ ಕೂಡ ಒಬ್ಬರು.. ಕಾಲಿವುಡ್‌ ಜೊತೆಗೆ ಟಾಲಿವುಡ್‌ನಲ್ಲೂ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕ. 90ರ ದಶಕದಲ್ಲಿ ವಿಕ್ರಮ್ ಅವರ ಚಿತ್ರಗಳಿಗೆ ಅಷ್ಟೊಂದು ಕ್ರೇಜ್ ಇರಲಿಲ್ಲ, ಆದರೆ ಈಗ ಇವರ ಕ್ರೇಜ್‌ ಹೇಳತೀರದ್ದು..  

ಹೆಚ್ಚಾಗಿ ಸೌತ್‌ ಸಿನಿಪ್ರೇಕ್ಷಕರಿಗೆ ವಿಕ್ರಮ್‌ ಅವರು, ಅಪರಿಚಿತ ಸಿನಿಮಾದ ಮೂಲಕ ಪರಿಚಯ. ಈ ಸಿನಿಮಾದಲ್ಲಿ ಅವರ ಅಮೋಘ ಅಭಿನಯದ ಎಂಥಹವನ್ನೂ ಅಚ್ಚರಿಗೊಳಿಸುತ್ತದೆ.. ಇಂದಿಗೂ ಈ ಸಿನಿಮಾವನ್ನು ಜನ ಅದೇ ಕುತೂಹಲದಿಂದ ನೋಡುತ್ತಾರೆ..  

 ಅಪರಿಚಿತ ಚಿತ್ರದ ನಂತರ ವಿಕ್ರಮ್ ಗೆ ಆ ರೇಂಜ್ ನಲ್ಲಿ ಮತ್ತೊಂದು ಹಿಟ್ ಸಿನಿಮಾ ಸಿಗಲಿಲ್ಲ. ಆ ಮೂಲಕ ಸೌತ್‌ನಲ್ಲಿ ಅವರ ಮಾರುಕಟ್ಟೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿತು. ಇದರ ನಡುವೆ ಮಲ್ಲಣ್ಣ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ..   

ಚಿತ್ರಕ್ಕಾಗಿ ಪ್ರಾಣ ಕೊಡುವ ಕಲಾವಿದರಲ್ಲಿ ವಿಕ್ರಮ್ ಕೂಡ ಒಬ್ಬರು. ಚಿತ್ರಕ್ಕೆ ಏನು ಬೇಕೋ ಅದಕ್ಕಿಂತ ಹೆಚ್ಚು ಶ್ರಮವಹಿಸುವ ನಾಯಕ. ಅನೇಕರು ವಿಕ್ರಮ್ ಅವರನ್ನು ನಿರ್ದೇಶಕರ ನಾಯಕ ಎಂದೂ ಕರೆಯುತ್ತಾರೆ. ಏಕೆಂದರೆ ಒಬ್ಬ ನಿರ್ದೇಶಕನ ದೃಷ್ಟಿಯನ್ನು ಬಹಳ ಬೇಗನೆ ಹಿಡಿಯುತ್ತಾನೆ...  

ಇದೀಗ ಅವರ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಕ್ರಮ ಅಭಿನಯದ ತಂಗಾಲನ್ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಈ ಚಿತ್ರದ ಟೀಸರ್‌ಗಳು ಮತ್ತು ಗ್ಲಿಂಪ್‌ಗಳು ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ.   

ಈಗ ಸ್ಟಾರ್ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಕ್ರಮ್ 4 ವರ್ಷಗಳ ಕಾಲ ವ್ಹೀಲ್‌ ಚೇರ್ ಮೇಲೆ ಜೀವನ ಕಳೆದಿದ್ದಾರೆ.. ಹೌದು, ವಿಕ್ರಮ್ 12 ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.   

ಬಲಗಾಲು ತೆಗೆಯುವ ಹಂತಕ್ಕೆ ಹೋದರೂ, ವಿಕ್ರಂನ ತಾಯಿ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಆ ಕಾಲನ್ನು ಉಳಿಸಿಕೊಳ್ಳಲು ಬರೋಬ್ಬರಿ 23 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆ ಅಪಘಾತದ ನಂತರ, ಅವರು ಸುಮಾರು 4 ವರ್ಷಗಳ ಕಾಲ ವ್ಹೀಲ್‌ಚೇರ್‌ನಲ್ಲಿ ಜೀವನ ಕಳೆಯುವಂತಾಯಿತು. ಇದನ್ನು ಸ್ವತಃ ವಿಕ್ರಮ್ ಅವರೇ ಹೇಳಿಕೊಂಡಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link