ಸದ್ದಿಲ್ಲದೇ ಮದುವೆಯಾದ ಖ್ಯಾತ ನಟಿ..! ಫೋಟೋಸ್‌ ಶೇರ್‌ ಮಾಡಿ ಸಿಹಿ ಸುದ್ದಿ ನೀಡಿದ ಬ್ರಿಗಿಡಾ

Tue, 30 Jul 2024-11:32 am,

ತಮಿಳಿನಲ್ಲಿ ಖ್ಯಾತ ನಟಿ ಬ್ರಿಗಿಡಾ ಮದುವೆ ಲುಕ್‌ನಲ್ಲಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  

ಆಹಾ ಕಲ್ಯಾಣಂ ವೆಬ್ ಸರಣಿ ಮೂಲಕ ಬ್ರಿಗಿಡಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ವೆಬ್ ಸರಣಿಯ ಮೂಲಕ ಖ್ಯಾತಿ ಗಳಿಸಿದರು.  

ಆಹಾ ಕಲ್ಯಾಣಂಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬೆನ್ನಲ್ಲೇ ಬ್ರಿಗಿಡಾಗೆ ಸಿನಿಮಾ ಆಫರ್‌ಗಳು ಬರತೊಡಗಿದವು.  

ಆಹಾ ಕಲ್ಯಾಣಂ ವೆಬ್ ಸರಣಿಯಲ್ಲಿ ಬ್ರಿಗಿಡಾ ಟೀಚರ್ ಪಾತ್ರವನ್ನು ನಿರ್ವಹಿಸಿದ್ದಾರೆ.  

ಪಾರ್ತಿಬನ್ ನಟಿಸಿದ ಇರವಿನ್ ಆಸ್ಟ್ರಲ್ ಚಿತ್ರದಲ್ಲಿ ಬ್ರಿಗಿಡಾಗೆ ಪ್ರಮುಖ ಪಾತ್ರವನ್ನು ನೀಡಲಾಯಿತು.  

ಸಧ್ಯ ನಿರ್ದೇಶಕ ವಿಘ್ನೇಶ್ ಕಾರ್ತಿಕ್ ಜೊತೆಗೆ ಮದುವೆ ಲುಕ್‌ನಲ್ಲಿ ಬ್ರಿಗಿಡಾ ಕಾಣಿಸಿಕೊಂಡಿದ್ದಾರೆ.. ಸ್ವತಃ ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..  

ಇಬ್ಬರು ಮದುವೆಯಾಗಿದ್ದಾರಾ? ಅಥವಾ ಹೊಸ ಸಿನಿಮಾದ ಪ್ರಚಾರಕ್ಕೆ ಈ ಫೋಟೋಸ್‌ ಶೇರ್‌ ಮಾಡಿದ್ದಾರಾ..? ಎನ್ನುವ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ..  

ಅಲ್ಲದೆ ಇನ್ನು ಕೆಲವರು ಇದು ಇವರಿಬ್ಬರ ಮುಂಬರುವ ಚಿತ್ರದ ಫೋಟೋ ಅಂತ ಕಾಮೆಂಟ್‌ ಮಾಡುತ್ತಿದ್ದು, ಇನ್ನೂ ಕೆಲವರು ಇಬ್ಬರು ಮದುವೆಯಾಗಿದ್ದಾರೆ ಎಂದು ವಿಶ್‌ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link