Fertility Treatment: ಬಂಜೆತನ ನಿವಾರಿಸಲು ಆಯುರ್ವೇದ ಮೊರೆ ಹೋದ ಫೇಮಸ್ ಸೆಲೆಬ್ರಿಟಿ
ಕೌರ್ಟ್ನಿ ಕಾರ್ಡಶಿಯಾನ್ ತಾಯಿಯಾಗಲು ಆಯುರ್ವೇದ ಔಷಧಗಳನ್ನು ಪಡೆದಿದ್ದಾರೆ. ಇದಕ್ಕಾಗಿ ಅವರು ಪಂಚಕರ್ಮ ಚಿಕಿತ್ಸೆ (ಪುರಾತನ ಭಾರತೀಯ ವೈದ್ಯಕೀಯ ವ್ಯವಸ್ಥೆ)ಯನ್ನು ಅಳವಡಿಸಿಕೊಂಡರು. ಅದನ್ನು ಸಂಪೂರ್ಣ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಅನುಸರಿಸಿದ್ದಾರೆ.
ಈ ಮಾಹಿತಿಯನ್ನು ‘ದಿ ಕಾರ್ಡಶಿಯಾನ್’ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕೌರ್ಟ್ನಿ ಕಾರ್ಡಶಿಯಾನ್ ಮತ್ತು ಡ್ರಮ್ಮರ್ ಆಗಿರುವ ಆಕೆಯ ಪತಿ ಟ್ರಾವಿಸ್ ಬಾರ್ಕರ್ ಇಬ್ಬರೂ ದೇಹದ ನಿರ್ವಿಶೀಕರಣ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವೇಳೆ ದಂಪತಿಗೆ ಪಂಚಕರ್ಮ ಶುದ್ಧಿಯ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ದಂಪತಿ ಚಿಕಿತ್ಸೆಗಾಗಿ ಪ್ರಾಚೀನ ಭಾರತೀಯ ಪದ್ಧತಿಯನ್ನು ಅನುಸರಿಸಿದ್ದಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸುವ ಪ್ರಯತ್ನವೂ ನಡೆದಿತ್ತಂತೆ. ಪಂಚಕರ್ಮವನ್ನು ಪಡೆಯುವ ಮೊದಲು ಕೌರ್ಟ್ನಿ ಕಾರ್ಡಶಿಯಾನ್, ಐವಿಎಫ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಆಯುರ್ವೇದದ ಮೂಲಕ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಅವರು ತಿಳಿದ ಮೇಲೆ ಈ ಬಗ್ಗೆ ಒಲವು ತೋರಿಸಿದ್ದಾರೆ.
ಈ ಚಿಕಿತ್ಸೆಯ ಸಮಯದಲ್ಲಿ, ದಂಪತಿಗಳು ಲೈಂಗಿಕತೆ, ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ಸಂಪೂರ್ಣವಾಗಿ ದೂರವಿದ್ದರು. ಈ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲು ಕೌರ್ಟ್ನಿ ಕಾರ್ಡಶಿಯಾನ್ ಕಾರಣವನ್ನೂ ನೀಡಿದ್ದಾರೆ. ಐವಿಎಫ್ ಚಿಕಿತ್ಸೆಯ ಕೊನೆಯಲ್ಲಿ ಅದು ಯಶಸ್ವಿಯಾಗಿರಲಿಲ್ಲ. ಆದ್ದರಿಂದ ಆಯುರ್ವೇದದ ಈ ಪಂಚಕರ್ಮ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ.
ಪಂಚಕರ್ಮವು ದೇಹದಿಂದ ವಿಷವನ್ನು ತೆಗೆದುಹಾಕುವ ಸಾವಿರ ವರ್ಷಗಳ ಹಿಂದಿನ ವಿಧಾನವಾಗಿದೆ. ಈ ಆಯುರ್ವೇದ ಔಷಧ ಪಂಚಕರ್ಮದಲ್ಲಿ ಐದು ಪ್ರಕ್ರಿಯೆಗಳಿವೆ. ಇವುಗಳನ್ನು ವಾಮನ, ವಿರೇಚನ, ನಾಸ್ಯ, ರಕ್ತಮೋಕ್ಷನ ಮತ್ತು ಅನುಭವವಸ್ತಿ ಎಂದು ಕರೆಯಲಾಗುತ್ತದೆ. ಈ ಐದರ ಸಂಯೋಜನೆಯನ್ನು ಪಂಚಕರ್ಮ ಎನ್ನುತ್ತಾರೆ. ಈ ಐದರ ಉದ್ದೇಶವು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುವುದು. ಈ ಪ್ರಸಿದ್ಧ ಸೆಲೆಬ್ರಿಟಿ ದಂಪತಿ ತಮ್ಮ ಚಿಕಿತ್ಸೆಗಾಗಿ ಭಾರತೀಯ ಆಯುರ್ವೇದದ ಸಹಾಯವನ್ನು ಪಡೆದಿದ್ದು, ಈ ಸುದ್ದಿ ವೈರಲ್ ಆಗಿದೆ.