`ಬರ್ತಾನವ್ವ ಭೂಪ ಬಂಗಾರಿ ಮಡಿಲಿನಲಿ..` ಮಿಲನಾ ಸೊಬಗಿಗೆ ಯಾರ ದೃಷ್ಟಿಯೂ ತಾಕದಿರಲಿ..!

Sat, 10 Aug 2024-12:19 pm,

ಲವ್‌ ಮಾಕಟೇಲ್‌ನ ಖ್ಯಾತ ಸ್ಯಾಂಡಲ್‌ವುಡ್‌ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ತಮ್ಮ ಹೊಸ ಪಯಣವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದಾರೆ. ತಾವು ಪೋಷಕರಾಗುತ್ತೇವೆ ಎಂದು ತಿಳಿದಾಗಿನಿಂದ ಈ ಜೋಡಿ ಮುದ್ದಾದ ಫೋಟೋಗಲಿಗೆ ಪೋಸ್‌ ನೀಡಿ ಈ ಚಿತ್ರಗಳನ್ನು ಪೋಸ್ಟ್‌ ಮಾಡಿ ತಮ್ಮ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೂ ಹಂಚಿಕೊಳ್ಳುತ್ತಿದ್ದಾರೆ.  

ತುಂಬು ಗರ್ಭಿಣಿ ಆಗಿರುವ ಮಿಲನಾ ನಾಗರಾಜ್‌ ಇನ್ನೇನು ಕೆಲವೇ ದಿನಗಳಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಲಿದ್ದಾರೆ. ಇದರ ಬೆನ್ನಲ್ಲೆ ಕೃಷ್ಣ ಹಾಗೂ ಮಿಲನಾ ದಂಪತಿ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ತಮ್ಮ ಮನೆಯಲ್ಲಿಯೇ ಮಾಡಿ ಮುಗಿಸಿದ್ದಾರೆ.  

ಸೀಮಂತ ಕಾರ್ಯಕ್ರಮದಲ್ಲಿ ನಟಿ ಮಿಲನಾ ನೇರಳೆ ಸೀರೆ, ಚಿನ್ನದ ಆಭರಣ ತೊಟ್ಟು ಮುದ್ದಾಗಿ ಕಾನುತ್ತಿದ್ದು, ಇದಕ್ಕೆ ಕಾಂಟ್ರಾಸ್ಟಿಂಗ್‌ ಆಗಿ ಕೃಷ್ಣ ಕ್ರೀಮ್‌ ಕಲರ್‌ ಪಜಾಮ ಧರಿಸಿ ಮುದ್ದಾದ ಮಡದಿಯೊಂದಿಗೆ ಫೋಟೊಸ್‌ಗೆ ಪೋಸ್‌ ಕೊಟ್ಟಿದ್ದಾರೆ.  

ಮನೆಯಲ್ಲಿಯೇ ಸಿಂಪಲ್‌ ಆಗಿ ಸೀಮಂತ ಕಾರ್ಯಕ್ರಮ ಮಾಡಿಕೊಂಡಿರುವ ಮಿಲನಾ ಹಾಗೂ ಕೃಷ್ಣ ಸಾಮಾಜಿಕ ಜಾಲತಾಣ ಈ ಪೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಸ್‌ ನೋಡಿ ಅಭಿಮಾನಿಗಳು ಕ್ಯೂಟ್‌ ಜೋಡಿಗೆ ಶುಭ ಹಾರೈಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link