Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿ
ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದು, ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ನಿಮಗಾಗಿ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಮುಖೇಶ್ ಅಂಬಾನಿಯವರ ಕಂಪನಿಯಿಂದ ಉತ್ತಮ ಉಡುಗೊರೆ ಸಿಗುತ್ತಿದೆ.
ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಯಲ್ಲಿ 84 ದಿನಗಳ ರಿಚಾರ್ಜ್ ಯೋಜನೆಯನ್ನು ಘೋಷಿಸಿದೆ.
ರೀಚಾರ್ಜ್ ಯೋಜನೆಯು ಜಿಯೋ ಪೋರ್ಟಲ್ ಅಥವಾ MyJio ಅಪ್ಲಿಕೇಶನ್‌ನಲ್ಲಿ ಪ್ರಿಪೇಯ್ಡ್ ಯೋಜನೆಗಳಲ್ಲಿ ಲಭ್ಯವಿರುವ ಯೋಜನೆಗಳಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದೆ. ಇದರ ಬೆಲೆ 479 ರೂ.ಗಳು ಮಾತ್ರ.
ಜಿಯೋ 479 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ 84 ದಿನಗಳವರೆಗೆ ಒಟ್ಟು 6ಜಿಬಿ ಡೇಟಾ, ಉಚಿತ ಕರೆ, 1000 ಎಸ್‌ಎಮ್‌ಎಸ್ ಉಚಿತವಾಗಿ ಸಿಗಲಿದೆ.
ಇದಲ್ಲದೆ, ಈ ಜಿಯೋ 479 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೌಲಭ್ಯವೂ ಸಿಗಲಿದೆ.
ಈ ಯೋಜನೆಯಲ್ಲಿ ಬಳಕೆದಾರರು ಹೆಚ್ಚುವರಿಯಾಗಿ ಜಿಯೋ ಆರಂಭಿಸುತ್ತಿರುವ ಎರಡು ಹೊಸ ಅಪ್ಲಿಕೇಶನ್‌ಗಳಾದ JioTranslate ಮತ್ತು JioSafe ಅನ್ನು ವರ್ಷಪೂರ್ತಿ ಉಚಿತವಾಗಿ ಬಳಸಲು ಸಾಧ್ಯವಾಗುತ್ತದೆ.