Krithi shetty : ಕೃತಿ ಅಂದದ ಮೈ ನೆನೆಸಿದ ಮಳೆರಾಯ ಬಲು ಅದೃಷ್ಟವಂತ..! ಫೋಟೋಸ್ ನೋಡಿ
ನಟಿ ಕೃತಿ ಶೆಟ್ಟಿ ಸಧ್ಯ ತೆಲುಗು ಚಿತ್ರರಂಗದ ಸ್ಟಾರ್ ನಟಿಯರ ಪಟ್ಟಿಯಲ್ಲಿದ್ದಾರೆ. ಈ ಸುಂದರಿಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಕೃತಿ ಆಗಾಗ ಫೋಟೋ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.
ಇತ್ತೀಚಿಗೆ ಮಳೆಯಲ್ಲಿ ಕೊಡೆ ಹಿಡಿದು ನೆನೆದ ಸುಂದರಿ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.
ತುಂಡು ಬಟ್ಟೆತೊಟ್ಟು ಕೈಯಲ್ಲಿ ಛತ್ರಿ ಇದ್ದರೂ ಮಳೆಗೆ ನೆನೆದ ಕೃತಿ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಿನಿಮಾ ವಿಚಾರವಾಗಿ ಹೇಳುವುದಾದರೆ, ಇತ್ತೀಚೆಗೆ ನಾಗ ಚೈತನ್ಯ ಅಭಿನಯದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ.
ಇತ್ತೀಚೆಗೆ ಕೃತಿ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಚಿತ್ರಗಳು ಸತತ ಸೋಲು ಕಾಣುತ್ತಿರುವುದರಿಂದ ಕೆಲವು ದಿನಗಳ ಕಾಲ ಹೊಸ ಚಿತ್ರಗಳನ್ನು ಕೃತಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.