ಈ ರಾಶಿಯವರ ಮೇಲೆ ಕುಬೇರನ ಕೃಪೆ! ವರ್ಷ ಪೂರ್ತಿ ಕೈಯ್ಯಲ್ಲಿ ಕುಣಿದಾಡುವುದು ಧನ

Tue, 31 Jan 2023-8:48 am,

ಕಟಕ ರಾಶಿ : ಕುಬೇರ ದೇವ ಕಟಕ ರಾಶಿಯವರ ಮೇಲೆ ವಿಶೇಷ ಕರುಣೆ ತೋರುತ್ತಾನೆ.  ಈ ವರ್ಷ ಪೂರ್ತಿ ಕಟಕ ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯುವುದು. ಈ ರಾಶಿಯವರು ಬುದ್ಧಿವಂತರು, ಶ್ರಮಶೀಲರು ಮತ್ತು ಪ್ರಾಮಾಣಿಕರು. ಅಷ್ಟೇ ಅಲ್ಲ ಏನೇ ಕೆಲಸ ಮಾಡುವುದಾದರೂ ಸಂಪೂರ್ಣ ಸಮರ್ಪಣಾ ಭಾವದಿಂದ ಮಾಡುತ್ತಾರೆ. ಈ ಕಾರಣದಿಂದಾಗಿ, ಕುಬೇರ ದೇವನ ಅನುಗ್ರಹದ ಜೊತೆಗೆ, ಅದೃಷ್ಟವೂ ಇವರ ಕೈ ಹಿಡಿಯುತ್ತದೆ. ಕುಬೇರ ದೇವನ ಕೃಪೆಯಿಂದ ಉನ್ನತ ಸ್ಥಾನಕ್ಕೆ ಏರುತ್ತಾರೆ.    

ವೃಶ್ಚಿಕ ರಾಶಿ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಈ ರಾಶಿಯವರ ಮೇಲೆ ಕುಬೇರನ  ಆಶೀರ್ವಾದ ಸದಾ ಇರುತ್ತದೆ.  ಇನ್ನು ಕುಬೇರನ ಕೃಪೆಯಿಂದ ಈ ವರ್ಷಪೂರ್ತಿ  ಈ ರಾಶಿಯವರ ಪಾಲಿಗೆ ಸಂತಸವೇ ಇರಲಿದೆ. ಕುಬೇರ ದೇವನ ಕೃಪೆಯಿಂದ ಚಿಕ್ಕ ವಯಸ್ಸಿನಲ್ಲೇ ಇವರು ಯಶಸ್ಸು ಕೀರ್ತಿ ಪಡೆಯುತ್ತಾರೆ. ಇವರ ಜೀವನದಲ್ಲಿ ಹಣದ ಕೊರತೆಯಾಗುವುದೇ  ಇಲ್ಲ.     

ತುಲಾ ರಾಶಿ : ಹಣಕಾಸಿನ ವಿಚಾರದಲ್ಲಿ ಈ ರಾಶಿಯವರು ಕೂಡಾ ಅದೃಷ್ಟವಂತರು. ಕುಬೇರನ ಕೃಪೆಯಿಂದ ಈ ವರ್ಷ ಆರ್ಥಿಕ ಸಮಸ್ಯೆ ಎದುರಾಗುವುದೇ ಇಲ್ಲ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ.  ಕುಬೇರ ದೇವನ ಅನುಗ್ರಹದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಕಾಣುವುದು ಸಾಧ್ಯವಾಗುತ್ತದೆ. ಈ ವರ್ಷ ಪೂರ್ತಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಕುಬೇರ ದೇವನ ಅನುಗ್ರಹ ಇದ್ದೇ ಇರುತ್ತದೆ. 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link