ಈ ರಾಶಿಯವರ ಜಾತಕದಲ್ಲಿ ಕುಬೇರ ಯೋಗ ! ಮಣ್ಣು ಕೂಡಾ ಹೊನ್ನಾಗುವ ಸಮಯ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ಬಹಳ ಮಹತ್ವದ ಸ್ಥಾನವಿದೆ. ಗುರುವನ್ನು ಸಂತೋಷ ಮತ್ತು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗುತ್ತದೆ.
ಮೇಷ ರಾಶಿಯಲ್ಲಿ ಗುರು : ಗುರು ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದರು. ಸೆಪ್ಟೆಂಬರ್ 4 ರವರೆಗೆ ಗುರು ಈ ರಾಶಿಯಲ್ಲಿ ಇರಲಿದ್ದಾರೆ. ಆದರೆ ಸೆಪ್ಟೆಂಬರ್ 4, 2023 ರಿಂದ ಗುರುವಿನ ವಕ್ರ ನಡೆ ಅಥವಾ ಹಿಮ್ಮುಖ ಚಲನೆ ಆರಂಭವಾಗಲಿದೆ.
ರಾಶಿಗಳ ಮೇಲೆ ಪರಿಣಾಮ: ಗುರು ಮೇಷದಲ್ಲಿದ್ದು ಸೆಪ್ಟೆಂಬರ್‌ನಲ್ಲಿ ಮೀನ ರಾಶಿಯಲ್ಲಿ ಹಿಮ್ಮುಖ ಸಂಚಾರ ಆರಂಭಿಸಲಿದ್ದಾರೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಆದರೆ ಕೆಲವು ರಾಶಿಗಳಿಗೆ ಅತಿಯಾದ ಪ್ರಯೋಜನಗಳನ್ನು ನೀಡುತ್ತದೆ.
ಮೇಷ: ಗುರು ವಕ್ರ ಸಂಚಾರದಿಂದ ಮೇಷ ರಾಶಿಯವರಿಗೆ ಶುಭಕಾಲ ಆರಂಭವಾಗಲಿದೆ. ಹೊಸ ಆದಾಯದ ಮೂಲಗಳು ಲಭ್ಯವಾಗಲಿವೆ. ಉದ್ಯಮಿಗಳಿಗೆ ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಯಶಸ್ವಿಯಾಗುವರು.
ಮಿಥುನ: ಗುರುವಿನ ಸಂಕ್ರಮಣವು ಮಿಥುನ ರಾಶಿಯವರಿಗೆ ಅನೇಕ ಯಶಸ್ಸನ್ನು ಪರಿಚಯಿಸುವ ಸಮಯವಾಗಿರುತ್ತದೆ. ಖಾಸಗಿ ಉದ್ಯೋಗಿಗಳ ಜೀವನದಲ್ಲಿ ಉತ್ತಮ ಅವಧಿ ಪ್ರಾರಂಭವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಮಿಥುನ ರಾಶಿಯವರಿಗೆ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ
ಸಿಂಹ: ಸಿಂಹ ರಾಶಿಯವರ ಶ್ರಮಕ್ಕೆ ಸಂಪೂರ್ಣ ಪ್ರತಿಫಲ ದೊರೆಯಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಆದಾಯ ಪಡೆದುಕೊಳ್ಳಬಹುದು. ಇಲ್ಲಿಯವರೆಗೆ ಅಡೆತಡೆಗಳು ಬಂದು ನಿಂತು ಹೋಗಿದ್ದ ಕೆಲಸ ಮತ್ತೆ ಚುರುಕಾಗುತ್ತದೆ. ಆಸೆಗಳು ಈಡೇರುವ ಸಾಧ್ಯತೆ ಇದೆ.
ಮೀನ: ಮೀನ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಿಸುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಬರಲಿವೆ. ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ಯಾವುದೇ ಕೆಲಸವು ಉತ್ತಮ ಫಲಿತಾಂಶಗಳನ್ನು ತರುತ್ತದೆ.