ಈ ಪೋಷಕಾಂಶದ ಕೊರತೆಯಿಂದಲೂ ಕೂದಲು ಉದುರುತ್ತೆ!
ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖ ಕಾರಣವೆಂದರೆ, ಕೆಟ್ಟ ಜೀವನಶೈಲಿ, ಒತ್ತಡ, ಪೋಷಕಾಂಶದ ಕೊರತೆ.
ಆರೋಗ್ಯಕರ ಕೂದಲಿಗಾಗಿ ಕಬ್ಬಿಣ, ವಿಟಮಿನ್ ಡಿ ಮುಖ್ಯ ಎಂದು ನಿಮಗೆ ತಿಳಿದಿರಬಹುದು. ಆದರೆ, ಕೂದಲ ಬೆಳವಣಿಗೆಗೆ, ಆರೋಗ್ಯಕರ ಕೂದಲಿಗೆ ಸತು ಕೂಡ ಬಹಳ ಮುಖ್ಯ. ದೇಹದಲ್ಲಿ ಸತುವಿನ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಬೋಳು ತಲೆ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ನೀವೂ ಕೂಡ ಅತಿಯಾದ ಕೂದಲು ಉದುರುವಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತಪ್ಪದೇ ಕಡಲೆಕಾಯಿ, ಅದರಲ್ಲೂ ನೆಲಗಡಲೆಯನ್ನು ಸೇವಿಸಿ. ಇದರಲ್ಲಿ ಸತು, ವಿಟಮಿನ್ ಇ, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಹೇರಳವಾಗಿದ್ದು ಕೂದಲ ಬೆಳವಣಿಗೆಗೆ ಪ್ರಯೋಜನಕಾರಿ ಆಗಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸಿಕೊಳ್ಳುವ ಮೂಲಕವೂ ನೀವು ಸತುವಿನ ಕೊರತೆಯನ್ನು ನಿವಾರಿಸಬಹುದು.
ಅಣಬೆ ಎಂದರೆ ಮಶ್ರೂಂನಲ್ಲಿಯೂ ಕೂಡ ಸತು ಹೇರಳವಾಗಿದೆ. ಮಾತ್ರವಲ್ಲ ಈ ಸೂಪರ್‌ಫುಡ್‌ನಲ್ಲಿ ಪ್ರೋಟೀನ್, ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ ಸಹ ಕಂಡುಬರುತ್ತವೆ. ಹಾಗಾಗಿ, ಕೂದಲನ್ನು ಆರೋಗ್ಯವಾಗಿರಿಸುವಲ್ಲಿ ಅಣಬೆ ಪ್ರಮುಖ ಪಾತ್ರ ವಹಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.