ಹೊಟ್ಟೆಯಲ್ಲಿ ಕಿರಿಕಿರಿ.. ಹುಳಿತೇಗು ಬರ್ತಿದೆಯಾ? ಅದಕ್ಕೆ ಕಾರಣ ʼಈʼ ವಿಟಮಿಟ್ ಕೊರತೆ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ
ಇಂತಹ ಒಂದು ವಿಟಮಿನ್ ನಮ್ಮ ಹೊಟ್ಟೆ ಚೆನ್ನಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಇದರ ಕಾರ್ಯವನ್ನು ಸುಧಾರಿಸಲು ಇದು ಅತ್ಯವಶ್ಯಕವಾಗಿದೆ. ಆದ್ದರಿಂದ ಈ ವಿಟಮಿನ್ ಯಾವುದು? ಅದು ಹೊಟ್ಟೆಗೆ ಏಕೆ ಮುಖ್ಯ? ಅದರ ಕೊರತೆಯನ್ನು ನಾವು ಹೇಗೆ ನಿವಾರಿಸಬಹುದು? ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ...
ವಿಟಮಿನ್ B3 ಕೊರತೆಯು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ ವಿಟಮಿನ್ B3ಯನ್ನು ನಿಯಾಸಿನ್ ಎಂತಲೂ ಕರೆಯುತ್ತಾರೆ, ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನಿಮ್ಮ ದೇಹದಿಂದ ಇದನ್ನು ಬಳಸಲಾಗುತ್ತದೆ. ಇದು ನಿಮ್ಮ ನರಮಂಡಲವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಗ್ರಂಥಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಚಲನೆಯನ್ನು ಸಮತೋಲನಗೊಳಿಸುತ್ತದೆ. ಈ ರೀತಿ ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವಿಟಮಿನ್ B3 ಕೊಬ್ಬಿನ ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ಅದರ ವೇಗವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಚಯಾಪಚಯ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅದನ್ನು ವೇಗಗೊಳಿಸುತ್ತದೆ. ಇದರಿಂದ ಕೊಬ್ಬು ವೇಗವಾಗಿ ಜೀರ್ಣವಾಗುತ್ತದೆ. ಈ ಕಾರಣದಿಂದ ದೇಹದ ಇತರ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ ಮತ್ತು ಇದು ಸ್ಥೂಲಕಾಯತೆಯಿಂದ ನಿಮ್ಮನ್ನು ತಡೆಯುತ್ತದೆ.
ವಿಟಮಿನ್ B3 ಕೊರತೆಯಿಂದ ನೀವು ಗ್ಯಾಸ್ ಮತ್ತು ಉಬ್ಬುವಿಕೆಯ ಸಮಸ್ಯೆಗಳನ್ನು ಹೊಂದಿರಬಹುದು. ಇದು ಕರುಳಿನಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಉಬ್ಬುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದ ಇದು ವಾಯುವನ್ನು ಸರಿಪಡಿಸುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ತಡೆಯುತ್ತದೆ. ಈ ರೀತಿಯಾಗಿ ಈ ವಿಟಮಿನ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)