ಬೆಂಡೆಕಾಯಿಯನ್ನು ಇದರ ಜೊತೆಗೆ ಬೆರೆಸಿ ಸೇವಿಸಿ ಸಾಕು.. ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ!
ಬೆಂಡೆಕಾಯಿಯನ್ನು ಹಸಿಯಾಗಿ ತಿನ್ನುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಬ್ಲಡ್ ಶುಗರ್ ನಿಯಂತ್ರಿಸಲು ಬೆಂಡೆಕಾಯಿ ಬಳಸುವ ವಿಧಾನ ಇಲ್ಲಿದೆ...
ಇದರಲ್ಲಿರುವ ಕರಗುವ ಫೈಬರ್ ಮಧುಮೇಹ ರೋಗಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿ ಬೆಂಡೆಕಾಯಿ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದು.
ಬೆಂಡೆಕಾಯಿಯನ್ನು ಎರಡೂ ಬದಿಯಲ್ಲಿ ಕತ್ತರಿಸಿ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಹಾಕಿ ಇಡಬೇಕು.
ಬೆಳಗ್ಗೆ ಎದ್ದ ಬಳಿಕ ನೀರಿನಿಂದ ಕತ್ತರಿಸಿದ ಬೆಂಡೆಕಾಯಿಯ ತುಂಡನ್ನು ತೆಗೆದು, ಆ ನೀರನ್ನು ಕುಡಿಯಿರಿ.
ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಕೆಲವು ತಿಂಗಳುಗಳವರೆಗೆ ನಿರಂತರವಾಗಿ ಈ ವಿಧಾನವನ್ನು ಅನುಸರಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.