ಈ ಫೋಟೋದಲ್ಲಿರುವ ಕಂದಮ್ಮ ಸೌತ್ ಸಿನಿರಂಗದಲ್ಲಿ ಪ್ರೈವೇಟ್ ಜೆಟ್ ಹೊಂದಿರುವ ಏಕೈಕ ನಟಿ! ಬರೋಬ್ಬರಿ 183 ಕೋಟಿ ಆಸ್ತಿಯ ಯಜಮಾನಿ!

Fri, 05 Apr 2024-4:37 pm,

ಮೃಣಾಲ್ ಠಾಕೂರ್‌’ನಿಂದ ಹಿಡಿದು ಐಶ್ವರ್ಯಾ ರೈವರೆಗೆ ಈ ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಸೌತ್ ಇಂಡಸ್ಟ್ರಿಯ ಪ್ರಮುಖ ನಟಿಯೊಬ್ಬಳ ಬಾಲ್ಯದ ಚಿತ್ರವೊಂದು ವೈರಲ್ ಆಗಿದೆ. ಈ ನಟಿ ಇತ್ತೀಚೆಗೆ ಬಾಲಿವುಡ್‌’ಗೂ ಎಂಟ್ರಿ ಕೊಟ್ಟಿದ್ದು, ಆಕೆ ಯಾರೆಂದು ಊಹಿಸಬಹುದೇ?

ಆ ಸೆಲೆಬ್ರಿಟಿಯ ಹೆಸರನ್ನು ಇನ್ನೂ ಊಹಿಸಲು ಸಾಧ್ಯವಾಗದವರಿಗೆ ಉತ್ತರವನ್ನು ನಾವೇ ಹೇಳುತ್ತೇವೆ. ಈ ಮಗು ಬೇರೆ ಯಾರೂ ಅಲ್ಲ, ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ.

ಇತ್ತೀಚಿಗೆ ವೈರಲ್ ಆಗಿರುವ ಬಾಲ್ಯದ ಚಿತ್ರಗಳಲ್ಲಿ, ನಯನತಾರಾ ಬಿಳಿ ಫ್ರಾಕ್ ಧರಿಸಿ ಕಾಣಿಸಿಕೊಂಡಿದ್ದು, ಆಕೆಯ ತಾಯಿ ನಟಿಯನ್ನು ತನ್ನ ತೋಳುಗಳಲ್ಲಿ ಬಿಗಿದಪ್ಪಿಕೊಂಡಿದ್ದಾರೆ. ನಟಿಯ ತಾಯಿ ಅವರನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದರೆ, ನಯನತಾರಾ ಅದನ್ನು ತಪ್ಪಿಸಲು ಯತ್ನಿಸುತ್ತಿರುವಂತೆ ತೋರುತ್ತಿದೆ.

ತಮಿಳು ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿರುವ ನಯನತಾರಾ, 2003 ರ ಮಲಯಾಳಂ ಚಲನಚಿತ್ರ ‘ಮಣಿಶಕ್ಕರೆ’ಯಲ್ಲಿ ಮೊದಲ ಬಾರಿಗೆ ನಟಿಸಿದರು. ಇದನ್ನು ಸತ್ಯನ್ ಅಂತಿಕ್ಕಾಡ್ ನಿರ್ದೇಶಿಸಿದ್ದು, ಜಯರಾಮ್ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

2005 ರಲ್ಲಿ ತಮಿಳಿನ ಚಂದ್ರಮುಖಿ ಚಿತ್ರದ ಮೂಲಕ ನಟಿಯ ಸಿನಿ ಬದುಕಿಗೆ ತಿರುವು ಸಿಕ್ಕಿತ್ತು. ಈ ಸಿನಿಮಾವನ್ನು ಪಿ ವಾಸು ಬರೆದು ನಿರ್ದೇಶಿಸಿದ್ದಾರೆ. ನಟಿ ಕೊನೆಯದಾಗಿ ಅನ್ನಪೂರ್ಣನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೀಲೇಶ್ ಕೃಷ್ಣ ನಿರ್ದೇಶಿಸಿ, ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ OTT ಬಿಡುಗಡೆಯ ನಂತರ, ಲವ್ ಜಿಹಾದ್ ಅನ್ನು ಉತ್ತೇಜಿಸುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಅಂಶ ಇದರಲ್ಲಿ ಇದೆ ಎಂದು ಚಿತ್ರದ ವಿರುದ್ಧ ಹಲವು ಆರೋಪಗಳು ಕೇಳಿಬಂದವು. ಬಳಿಕ ನೆಟ್‌ ಫ್ಲಿಕ್ಸ್‌’ನಿಂದ ತೆಗೆದುಹಾಕಲ್ಪಟ್ಟಿತು.

ಅಂದಹಾಗೆ ನಯನತಾರಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಇವರ ಬಳಿ ಪ್ರೈವೇಟ್ ಜೆಟ್ ಕೂಡ ಇದ್ದು, ಅನೇಕ ಕಾರುಗಳ ಒಡತಿಯೂ ಹೌದು. ಸದ್ಯ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿರುವ ನಯನತಾರಾ, ಇಬ್ಬರು ಮಕ್ಕಳು ತಾಯಿಯೂ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link