ಗೆಳತಿ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು.. ಬಳಿಕ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಖ್ಯಾತ ನಟಿ!
ಅಂದ, ನಟನೆ, ಹಾವ ಭಾವದಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ನಟಿಯರಲ್ಲಿ ದಿವಂಗತ ನಟಿ ಶ್ರೀದೇವಿ ಕೂಡ ಒಬ್ಬರು. ಬಾಲಿವುಡ್ ಇಂಡಸ್ಟ್ರಿಯ 'ಚಾಂದಿನಿ' ಎಂದೇ ಖ್ಯಾತಿ ಪಡೆದಿದ್ದ ಶ್ರೀದೇವಿ, ತಮ್ಮ ವೃತ್ತಿಜೀವನದಲ್ಲಿ 'ಮಿಸ್ಟರ್ ಇಂಡಿಯಾ', 'ಜುದಾಯಿ', 'ನಾಗಿನ್', 'ಲಾಡ್ಲಾ', 'ಚಾಲ್ಬಾಜ್' ನಂತಹ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಇಷ್ಟೆಲ್ಲಾ ಹಿಟ್ ಸಿನಿಮಾಗಳನ್ನು ನೀಡಿದ್ದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರ ಪ್ರೇಮಜೀವನ ಬಹಳ ಆಸಕ್ತಿದಾಯಕವಾಗಿತ್ತು. ಮಿಥುನ್ ಚಕ್ರವರ್ತಿ ಜೊತೆ ಶ್ರೀದೇವಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಶ್ರೀದೇವಿ ತಮ್ಮ ಜೀವನ ಸಂಗಾತಿಯಾಗಿ ಬೋನಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡರು. ಅಂದಹಾಗೆ ಇವರಿಬ್ಬರ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂದೇ ಹೇಳಬಹುದು.
ಬೋನಿ ಕಪೂರ್ ಅವರ ಮೊದಲ ಹೆಂಡತಿಯ ಹೆಸರು ಮೋನಾ ಕಪೂರ್. ಅವರು ನಿಧನರಾಗಿದ್ದಾರೆ. ಅಂದಹಾಗೆ ಮೋನಾ ಶ್ರೀದೇವಿಗೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಈ ಕಾರಣಕ್ಕಾಗಿ ಮೋನಾ ಒಮ್ಮೆ ಶ್ರೀದೇವಿ ಅವರ ಮನೆಯಲ್ಲಿ ಉಳಿಯಲು ಸ್ಥಳವನ್ನು ನೀಡಿದ್ದರು.
ಆ ದಿನಗಳಲ್ಲಿ, ಶ್ರೀದೇವಿ ಮಿಥುನ್ ಚಕ್ರವರ್ತಿ ಜೊತೆ ಡೇಟಿಂಗ್ ಮಾಡುತ್ತಿದ್ದರು ಮತ್ತು ಬೋನಿ ಕಪೂರ್ ಕೂಡ ಮೋನಾ ಜೊತೆ ತುಂಬಾ ಸಂತೋಷವಾಗಿದ್ದರು. ಆದರೆ, ಮಿಥುನ್’ಗೆ ಶ್ರೀದೇವಿ ಮತ್ತು ಬೋನಿ ಕಪೂರ್ ಮೇಲೆ ಸ್ವಲ್ಪ ಅನುಮಾನವಿತ್ತು. ಈ ಕಾರಣಕ್ಕಾಗಿ ಮಿಥುನ್ ಮೇಲೆ ನಂಬಿಕೆ ಬರುವಂತೆ ಬೋನಿ ಕಪೂರ್ ಗೆ ಶ್ರೀದೇವಿ ರಾಖಿ ಕಟ್ಟಿದ್ದರು.
ಬೋನಿ ಕಪೂರ್ ಮತ್ತು ಶ್ರೀದೇವಿ ಭೇಟಿಯಾದಾಗ ಅವರ ನಡುವೆ ಏನೂ ಇರಲಿಲ್ಲ. ಆದರೆ 'ಮಿಸ್ಟರ್ ಇಂಡಿಯಾ' ಚಿತ್ರ ಅವರನ್ನು ಹತ್ತಿರ ತಂದಿತು. ಈ ಚಿತ್ರದ ಪಾತ್ರದೊಂದಿಗೆ ಬೋನಿ ಕಪೂರ್ ಶ್ರೀದೇವಿಗೆ ಮತ್ತಷ್ಟು ಹತ್ತಿರವಾಗಿ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಶ್ರೀದೇವಿ ಬೋನಿ ಕಪೂರ್ ಅವರನ್ನು ತನ್ನ ಸಹೋದರ ಎಂದು ಕರೆದ ಕಾರಣ ಬೋನಿ ಕಪೂರ್ ಅವರ ಬೆಳೆಯುತ್ತಿರುವ ಸ್ನೇಹಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಮೋನಾ ಕಪೂರ್ ಶ್ರೀದೇವಿಯ ಗರ್ಭಧಾರಣೆಯ ಬಗ್ಗೆ ತಿಳಿದಾಗ, ಆಘಾತಕ್ಕೀಡಾದರು.
ಇದಾದ ನಂತರ ಮೋನಾ ಕಪೂರ್ ಮತ್ತು ಬೋನಿ ಕಪೂರ್ ವಿಚ್ಛೇದನ ಪಡೆದರು. ಆ ಬಳಿಕ 1996 ರಲ್ಲಿ, ಬೋನಿ ಕಪೂರ್ ಶ್ರೀದೇವಿಯನ್ನು ದೇವಸ್ಥಾನದಲ್ಲಿ ವಿವಾಹವಾದರು. ಆದರೆ ಈ ಸಂದರ್ಭದಲ್ಲಿ ಶ್ರೀದೇವಿಯನ್ನು ಮನೆ ಮುರಿದವಳು ಎಂದೆಲ್ಲಾ ಟೀಕೆ ಮಾಡಲು ಪ್ರಾರಂಭಿಸಿದ್ದರು.