`ಆತ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ` ಎಂದ ಖ್ಯಾತ ಗಾಯಕಿ..! ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ?
ಚಿತ್ರ ರಂಗದಲ್ಲಿ ನಾವು ಆಗಾಗ ಲೈಂಗಿಕ ಕಿರುಕುಳದ ಬಗ್ಗೆ ಕೇಳಿರುತ್ತೇವೆ.ಇತ್ತೀಚಿಗೆ ಹಲವಾರು ನಟಿಯರು ತಮಗಾದ ಕಹಿ ಅನುಭವನ್ನು ಮಾಧ್ಯಮದ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.ಇದೊಂದು ರೀತಿ ಅಭಿಯಾನವಾಗಿ ಪರಿವರ್ತನೆಯಾಗಿತ್ತು.
ಈಗ ಇತ್ತೀಚಿಗೆ ಬಂಗಾಳಿ ಗಾಯಕಿ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಾ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸ್ಟ್ರೈಟ್ ಅಪ್ ವಿತ್ ಶ್ರೀ ಪಾಡ್‌ಕಾಸ್ಟ್‌ನಲ್ಲಿ ಲಗ್ನಜಿತಾ ಚಟರ್ಜಿಅವರು ಮಾತನಾಡುತ್ತಾ ಒಂದು ದಿನ ರಾಜೇಶ್ ರೋಶನ್ ಕೆಲಸದ ನಿಮತ್ತ ತಮ್ಮ ಮನೆಗೆ ಕರೆದಿದ್ದರು.ಹಾಗಾಗಿ ನಾನು ಅಲ್ಲಿಗೆ ತೆರಳಿದ್ದೆ.ಅವರ ಮನೆಯನ್ನು ನಾನು ನೋಡಿ ನಿಜಕ್ಕೂ ಬೆರಗಾಗಿದ್ದೇ ಏಕೆಂದರೆ ಅವರ ಮನೆ ಅಷ್ಟೊಂದು ಚೆನ್ನಾಗಿತ್ತು. ಆ ವೇಳೆ ಕೆಲವು ಜಾಹೀರಾತುಗಳಿಗೆ ಧ್ವನಿಯನ್ನು ನೀಡಿದ್ದೆ ಹಾಗಾಗಿ ಅದನ್ನು ನನಗೆ ತೋರಿಸಲು ಹೇಳಿದರು.ಆಗ ನಾನು ಟೇಬಲ್ ಮೇಲಿದ್ದ ಐಪ್ಯಾಡ್ ತೆಗೆದುಕೊಂಡು ಬ್ರೌಸ್ ಮಾಡಲು ಆರಂಭಿಸಿದೆ.ಈ ಸಂದರ್ಭದಲ್ಲಿ ರಾಜೇಶ್ ರೋಶನ ನನ್ನ ಹತ್ತಿರ ಬಂದ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದರು ಎಂದು ಲಗ್ನಜಿತಾ ಚಟರ್ಜಿ ಆರೋಪಿಸಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಅವರು 'ಶ್ಯಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ಆಲಿಯಾ ಭಟ್ ತಲೆಯಲ್ಲಿಯೇ ಯಾವುದೇ ಕೂದಲಿಲ್ಲ,ಎಂದು ರಾಜೇಶ್ ರೋಶನ್ ನನ್ನ ಬಳಿ ಹೇಳಿದರು.ನಾನು ಈ ಘಟನೆ ದೊಡ್ಡದು ಮಾಡದೆ ಅಲ್ಲಿಂದ ಜಾಗ ಕಾಲಿ ಮಾಡಿದೆ ಎಂದು ಅವರು ಹೇಳಿದ್ದಾರೆ.ಇಲ್ಲಿ ರಾಜೇಶ್ ರೋಶನ್ ಅವರದ್ದು ಒಂದು ಹೆಸರು ಮಾತ್ರ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜೇಶ್ ರೋಷನ್ ಕೇವಲ ಒಂದು ಹೆಸರು ಮಾತ್ರ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ ಎಂದು ಲಗ್ನಜಿತಾ ಚಕ್ರವರ್ತಿ ಹೇಳಿದ್ದಾರೆ.