ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದಲೇ ಆಶೀರ್ವಾದ ಪಡೆದಿದ್ದ ಈಕೆ ಕನ್ನಡದ ಪ್ರಖ್ಯಾತ ಕಿರುತೆರೆ ನಟಿ! ಯಾರೆಂದು ಗೆಸ್ ಮಾಡಿ ನೋಡೋಣ..
ಭಾಗ್ಯಲಕ್ಷ್ಮೀ ಧಾರಾವಾಹಿಯ ಮುಂದುವರೆದ ಭಾಗವಾಗಿ ಕಿರುತೆರೆ ಇತಿಹಾಸದಲ್ಲಿ ಹೊಸ ಪ್ರಯತ್ನ ಮಾಡಿದ ವಾಹಿನಿ, ಭರ್ಜರಿ ಯಶಸ್ಸನ್ನು ಸಾಧಿಸಿತು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಧಾರಾವಾಹಿ.
ಅಂದಹಾಗೆ ನಾವಿಂದು ಈ ವರದಿಯಲ್ಲಿ ಓರ್ವ ಖ್ಯಾತ ಕಿರುತೆರೆ ನಟಿಯ ಬಾಲ್ಯದ ಫೋಟೋವನ್ನು ನಿಮಗೆ ತೋರಿಸಲಿದ್ದೇವೆ. ಆಕೆ ಯಾರೆಂದು ಗೆಸ್ ಮಾಡಿದ್ರೆ ನೀವೇ ಜಾಣರು…ಒಂದು ವೇಳೆ ಈಕೆ ಯಾರೆಂದು ನಿಮಗೆ ತಿಳಿದಿದ್ದರೆ ನಾವೇ ನಿಮಗೆ ಉತ್ತರ ನೀಡುತ್ತೇವೆ.
ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಕೀರ್ತಿಯೇ ಈ ಬಾಲಕಿ. ಈಕೆಯ ನಿಜವಾದ ಹೆಸರು ತನ್ವಿ ರಾವ್.
ಲಕ್ಷ್ಮೀ ಬಾರಮ್ಮ ಧಾರಾವಾಹಿಗೂ ಮುನ್ನ ಅನೇಕ ಧಾರಾವಾಹಿಗಳಲ್ಲಿ ತನ್ವಿ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧೆ ಶ್ಯಾಮ ಧಾರಾವಾಹಿಯಲ್ಲಿ ತನ್ವಿ ನಾಯಕಿ ಆಗಿ ಅಭಿನಯಿಸಿದ್ದರು.
ಅಂದಹಾಗೆ ತನ್ವಿ ಖ್ಯಾತ ಭರತನಾಟ್ಯ ಕಲಾವಿದೆ. ಬಾಲ್ಯದಲ್ಲಿ ತನ್ವಿ ರಾವ್ ಅವರ ನೃತ್ಯ ಕಂಡಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು, ಆಕೆಗೆ ಆಶೀರ್ವಾದ ಮಾಡಿದ್ದರು.
ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ತನ್ವಿ ನಟಿಸುತ್ತಿದ್ದಾರೆ. ಜಮೆಲ ಎನ್ನುವ ಮುಸ್ಲಿಂ ಪಾತ್ರ ಮಾಡಿದ್ದ ತನ್ವಿ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ತನ್ವಿ ರಾವ್ 4 ನೇ ವಯಸ್ಸಿನಲ್ಲೇ ಕಥಕ್ ಡ್ಯಾನ್ಸ್ ಕ್ಲಾಸ್’ಗೆ ಸೇರಿದರು. ಇನ್ನು ಬಾಲಿವುಡ್’ನಲ್ಲಿ ಮಾಧುರಿ ದೀಕ್ಷಿತ್ ಅಭಿನಯದ ಗುಲಾಬ್ ಗ್ಯಾಂಗ್ ಸಿನಿಮಾದಲ್ಲಿಯೂ ತನ್ವಿ ನಟಿಸಿದ್ಧಾರೆ.