Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ?

Sun, 22 Sep 2024-8:33 am,

ರಾಜ್ಯದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಶುಭ ಸುದ್ದಿ ನೀಡಿದ್ದಾರೆ. ಎರಡು ತಿಂಗಳಿನಿಂದ ಖಾತೆ ಸೇರದೆ ಇರುವ ಗೃಹಲಕ್ಷ್ಮಿ ಹಣ  ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಬಿಚ್ಚಿಟ್ಟಿದ್ದಾರೆ.  

ಚುಣಾವಣಾ ಸಮಯದಲ್ಲಿ ರಾಜ್ಯಸರ್ಕಾರ ಐದು ಮಹತ್ವವಾದ ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿತ್ತು, ಅದರಲ್ಲಿ ಗೃಹಲ್ಷ್ಮಿ ಯೋಜನೆ ಕೂಡ ಒಂದು, ಗೃಹಲಕ್ಷ್ಮಿ ಹಣದಿಂದ ಹಲವರಿಗೆ ಸಹಾಯ ಆಗುತ್ತಿದೆ ಆದರೂ, ಹನ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ. ಈ ಕಾರಣದಿಂದ ರಾಜ್ಯದ ಜನ ಬೇಸರಗೊಂಡಿದ್ದು, ಹಣ ತಮ್ಮ ಖಾತೆಗೆ ಸೇರುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ.  

ಈ ಗ್ಯಾರಂಟಿ ಜಾರಿಯಾದಾಗಿನಿಂದ ಹಣ ವಿಳಂಬಬಾಗಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಕೂಡ ಹೀಗೆಯೇ ಆಗಿತ್ತು. ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗಿದ್ದ ಹಣ ಕೇಬಲ ಜೂನ್‌ ತಿಂಗಳ ಹಣವನ್ನಷ್ಟೆ ಖಾತೆಗೆ ಜಮೆ ಮಾಡಿತ್ತು. 

ಪ್ರತಿ ತಿಂಗಳಿಗೊಮ್ಮೆ ಖಾತೆ ಸೇರಬೇಕಿದ್ದ ಗೃಹಲಕ್ಷ್ಮಿ ಹಣ ಇದೀಗ ಮೂರು ತಿಂಗಳು ವಿಳಂಬವಾಗುತ್ತಿದೆ, ಜನ ಅಂತೂ ದುಡ್ಡು ಈ ತಿಂಗಳು ಬರುತ್ತೆ, ಇನ್ನೇನು ಮುಂದಿನ ತಿಂಗಳು ಬರಬಹುದು ಎಂದು ಕಾದು ಕಾದು ಸುಸ್ತಾಗಿದ್ದಾರೆ.

ಜುಲೈ ತಿಂಗಳು ಹಾಗೂ ಆಗಸ್ಟ್‌ ತಿಂಗಳಿನ ಗೃಹಲಕ್ಷ್ಮಿ ಹಣ ಇನ್ನೂ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಈಗ ಸಪ್ಟೆಂಬರ್‌ ತಿಂಗಳ ಮಧ್ಯದಲ್ಲಿದ್ದು, ಈ ತಿಂಗಳ ಹಣ ಸೇರಿಸಿದರೆ, ಒಟ್ಟು ಮೂರು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಅಂದರೆ ಒಟ್ಟು ರೂ. 6000 ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ.

ಇದೀಗ, ಮೂರು ತಿಂಗಳ ಹಣದ ಬಿಡಿಗಡೆಯ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಹತ್ವದ ಸುಳಿವು ನೀಡಿದ್ದಾರೆ. ಶೀಘ್ರವೇ ಗೃಹಿಣಿಯರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಗೃಹಲಕ್ಷ್ಣಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರ ಅಂದಾಜು 25000 ಕೋಟಿಯನ್ನು ಬಿಡುಗಡೆ ಮಾಡಿದೆ. ತಿಂಗಳಿಗೆ 2000 ರೂ, ಯಂತೆ ಸುಮಾರು 11 ತಿಂಗಳಿನಿದಮ ಗೃಹಿಣಿಯರ ಖಾತೆಗೆ ಜಮೆ ಮಾಡುತ್ತಾ ಬರುತ್ತಿದೆ, ಆದರೆ ಗೃಹಲಕ್ಷ್ಮಿಯರ ಖಾತೆಗೆ ಸರಿಯಾದ ಸಮಯಕ್ಕೆ ಹಣ ಹಾಕಲು ಅಡ್ಡಿಯಾಗುತ್ತಿರುವುದು ತಾಂತ್ರಿಕ ಸಮಸ್ಯೆ, ಇದನ್ನು ಆದಷ್ಟು ಬೇಗ ಸರಿ ಮಾಡಿ, ರಾಜ್ಯದ ಮಹಿಳೆಯರ ಖಾತೆಗೆ ಹಣ ಹಾಕಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link