Gruha Lakshmi: ಗೃಹಲಕ್ಷ್ಮಿ ಹಣದ ಜೊತೆಗೆ ಸಿಗಲಿದೆ ಬಂಪರ್ ಗಿಫ್ಟ್! ಜಸ್ಟ್ ಹೀಗೆ ಮಾಡಿ ಸಾಕು ಎಂದ ಲಕ್ಷ್ಮಿ ಹೆಬ್ಬಾಳ್ಕರ್

Mon, 02 Sep 2024-7:22 pm,

ರಾಜ್ಯದ ಗೃಹಿಣಿಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2000 ರೂ. ಹಣ ಪಡೆಯುತ್ತಿದ್ದಾರೆ. ಇದೀಗ ಹಣ ಪಡೆಯುತ್ತಿರುವ ಗೃಹಿಣಿಯರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರಿಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಭರ್ಜರಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರು ಮತ್ತೊಂದು ಬಂಪರ್ ಗಿಫ್ಟ್ ಗಿಟ್ಟಿಸಿಕೊಳ್ಳುವ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಹಾಗದರೆ ಆ ಗಿಫ್ಟ್ ಪಡೆಯುವುದು ಹೇಗೆ? ಇದನ್ನು ಪಡೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮಲಿಯೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಗೃಹಿಣಿಯರು ರೀಲ್ಸ್ ಮಾಡಿ ಬಂಪರ್ ಗಿಫ್ಟ್ ಗೆಲ್ಲಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಇಂದಿಗೆ ಒಂದು ವರ್ಷ ಪೂರೈಸಿದೆ ಈ ಹಿನ್ನೆಲೆಯಲ್ಲಿ, ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದ ಮಹಿಳೆಯರಿಗೆ ಇಂತಹ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. 

ಗೃಹ ಲಕ್ಷ್ಮಿ ಯೋಜನೆ ಒಂದು ವರ್ಷ ಪೂರೈಸಿದ ಸಂಧರ್ಭವಾಗಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಿಣಿಯರಿಗೆ ಅಭಿನಂದನೆ ಕೋರುತ್ತ ಈ ಬಂಪರ್ ಗಿಫ್ಟ್ ಗೆಲ್ಲುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ.

ಈ ಗಿಫ್ಟ್ ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ, ಗೃಹಲಕ್ಷ್ಮೀ ಹಣದಿಂದ ತಮಗಾದ ಉಪಯೋಗದ ಬಗ್ಗೆ ಗೃಹಿಣಿಯರು ಮಾತನಾಡುತ್ತಾ ರೀಲ್ಸ್ ಮಾಡಬೇಕು.

ತಾವು ಮಾಡಿದ ವಿಡಿಯೋಗಳನ್ನು ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟಾಗ್ರಮ್ ನಲ್ಲಿ ಹಂಚಿಕೊಳ್ಳಬೇಕು.

ಸೆಪ್ಟೆಂಬರ್ 01 ರಿಂದ ಸೆಪ್ಟೆಂಬರ್ 30 ರ ವರೆಗೆ ಗೃಹಿಣಿಯರಿಗೆ ಈ ಅವಕಾಶ ಸಿಗಲಿದ್ದು, ಯಾರ ವಿಡಿಯೋಗೆ ಹೆಚ್ಚು ವಿವ್ಸ್ ಬಂದಿರುತ್ತದೋ ಅಂಥಹ ವಿಡಿಯೋ ಯಜಮಾನಿ ಈ ಬಂಪರ್ ಪ್ರೈಸ್ ಗೆಲ್ಲಲಿದ್ದಾರೆ.

ಈ ರೀತಿ ಒಬ್ಬ ಯಜಮಾನಿ ಅಲ್ಲ ಟಾಪ್ 50 ಯಜಮಾನಿಯರನ್ನು ಆಯ್ದುಕೊಂಡು ಯಾರು ಹೆಚ್ಚು ವೀವ್ಸ್ 

ಪಡೆದಿರುತ್ತಾರೋ ಅಂಥಹ ಯಜಮಾನಿಯರಿಗೆ ಸಚಿವರು ಪ್ರೈಸ್ ನೀಡಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link