Lakshminarayana Rajyog 2024: ಫೆಬ್ರುವರಿಯಲ್ಲಿ ಬುಧ-ಶುಕ್ರರ ಕೃಪೆಯಿಂದ ಲಕ್ಷ್ಮಿ ನಾರಾಯಣ ಯೋಗ ರಚನೆ, ಈ ಜನರಿಗೆ ಮೇಲೆ ಭಾರಿ ಧನವೃಷ್ಟಿ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುಖ-ಸಂಪತ್ತಿನ ಕಾರಕ ಗ್ರಹ ಎಂದೇ ಕರೆಯಲಾಗುವ ಶುಕ್ರ ಫೆಬ್ರುಯರಿ 12, 2024 ರಂದು ಬೆಳಗ್ಗೆ 4 ಗಂಟೆ 41 ನಿಮಿಷಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದೆ. ಬುಧ ಈಗಾಗಲೇ ಮಕರ ರಾಶಿಯಲ್ಲಿ ವಿರಾಜಮಾನನಾಗಿರುವ ಕಾರಣ, ಮಕರ ರಾಶಿಯಲ್ಲಿ ಈ ಇಬ್ಬರ ಮೈತ್ರಿ ನೆರವೇರಿ, ಲಕ್ಷ್ಮಿ ನಾರಾಯಣ ರಾಜಯೋಗ ರಚನೆಯಾಗಲಿದೆ.
ಮೇಷ ರಾಶಿ: ನಿಮ್ಮ ಗೋಚರ ಜಾತಕದ ದ್ವಾದಶ ಭಾವದಲ್ಲಿ ಈ ಲಕ್ಷ್ಮಿನಾರಾಯಣ ರಾಜಯೋಗ ರಚನೆಯಾಗುತ್ತಿದೆ. ಹೀಗಿರುವಾಗ ನಿಮಗೆ ಭಾರಿ ಧನಲಾಭ ಉಂಟಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಇದರ ಜೊತೆಗೆ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಅಪಾರ ಯಶಸ್ಸು ಸಿಗಲಿದೆ. ಹಣ ಹೂಡಿಕೆಗೆ ಯೋಜನೆ ರೂಪಿಸುತ್ತಿದ್ದರೆ, ಈ ಅವಧಿಯಲ್ಲಿ ಹಣ ಹೂಡಿಕೆ ಮಾಡುವುದು ನಿಮಗೆ ಅಪಾರ ಲಾಭವನ್ನು ತಂದುಕೊಡಲಿದೆ. ಶುಕ್ರನ ಪ್ರಭಾವದಿಂದ ಸಂಬಂಧಗಳಲ್ಲಿ ಗಾಢ ಸಂಬಂಧ ಇರಲಿದೆ. ಇದಲ್ಲದೆ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಹೆಚ್ಚಾಗಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಕನ್ಯಾ ರಾಶಿ: ಲಕ್ಷ್ಮಿ ನಾರಾಯಣ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಶುಕ್ರ ಬುಧರು ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗೆ ಕಾರಣರಾಗಲಿದ್ದಾರೆ. ಹೊಸ ವ್ಯವಸಾಯ ಆರಂಭಿಸುವುದು ಲಾಭದಾಯಕ ಸಾಬೀತಾಗಲಿದೆ. ನೌಕರ ವರ್ಗದ ಜನರಿಗೆ ಅಪಾರ ಯಶಸ್ಸಿನ ಜೊತೆಗೆ ಉನ್ನತಿ ಸಿಗಲಿದೆ. ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳು ಪ್ರಸನ್ನರಾಗಳಿದ್ದು, ನಿಮಗೆ ವೇತನ ವೃದ್ಧಿ ಸೇರಿದಂತೆ, ಇತರೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಉತ್ತಮವಾಗಿರುವುದರ ಜೊತೆಗೆ ಮಕ್ಕಳ ಕಡೆಯಿಂದ ನಿಮಗೆ ದೊಡ್ಡ ಸಂತಸದ ಸುದ್ದಿ ಸಿಗಲಿದೆ.
ಮಕರ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಬುಧ ನಿಮಗೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ನೀಡಲಿದ್ದಾನೆ. ವಿಶೇಷವಾಗಿ ವೃತ್ತಿ ಜೀವನದಲ್ಲಿ ವೃದ್ಧಿ, ಉನ್ನತಿ, ಬಡ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು, ಕೆಲಸದ ಪ್ರತಿ ನಿಮ್ಮ ಶ್ರದ್ಧೆಯನ್ನು ನೋಡಿ ಮೇಲಾಧಿಕಾರಿಗಳು ನಿಮಗೆ ಪದೋನ್ನತಿಯ ಭಾಗ್ಯ ಕರುಣಿಸುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಪಾರ ಉನ್ನತಿ ಇರಲಿದೆ. ಹೊಸ ಒಡಂಬಡಿಕೆಯನ್ನು ನೀವು ಮಾಡಿಕೊಳ್ಳುವ ಸಾಧ್ಯತೆ ಇದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಜೀವನದಲ್ಲಿ ಅಪಾರ ಏಳಿಗೆಯಾಗಲಿದೆ. ವಿತ್ತೀಯ ಲಾಭ ಕೂಡ ಪ್ರಾಪ್ತಿಯಾಗಿ, ಕೌಟುಂಬಿಕ ವಾತಾವರಣ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಕುಟುಂಬ ಹಾಗೂ ಬಂಧು ಮಿತ್ರರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)