Lakshmi Narayana Rajyog 2024: ಜನವರಿ 18ಕ್ಕೆ ಲಕ್ಷ್ಮಿನಾರಾಯಣ ರಾಜಯೋಗ ರಚನೆ, ಬುಧ-ಶುಕ್ರರ ಕೃಪೆಯಿಂದ ಈ ಜನರಿಗೆ ಅಪಾರ ಧನಪ್ರಾಪ್ತಿ!

Thu, 04 Jan 2024-4:48 pm,

Lakshmi Narayana Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಲಕ್ಷ್ಮಿ ನಾರಾಯಣ ರಾಜಯೋಗ ರಚನೆಯಾಗುತ್ತಿದ್ದು, ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಧನದಾತ ಶುಕ್ರ ಹಾಗೂ ಬುಧನ ಕೃಪೆಯಿದ ಅಪಾರ ಧನ-ಸಂಪತ್ತು ಹರಿದುಬರಲಿದೆ.  (Spiritual News In Kannada)

ವೃಶ್ಚಿಕ ರಾಶಿ: ಈ ರಾಜಯೋಗ ರಚನೆ ನಿಮ್ಮ ಪಾಲಿಗೆ ಆರ್ಥಿಕ ದೃಷ್ಟಿಯಿಂದ ಅತ್ಯಂತ ಶುಭವಾಗಿರಲಿದೆ. ಇದು ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಕೆಲಸ ವ್ಯಾಪಾರದಲ್ಲಿ ನಿಮಗೆ ಆಕಸ್ಮಿಕ ಧನ ಲಾಭ ಉಂಟಾಗಲಿದೆ. ವ್ಯಾಪಾರಿಗಳಿಗೆ ಅವರಿಗೆ ಬರಬೇಕಾದ ಹಣ ಸಿಗಲಿದೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ. 

ಕುಂಭ ರಾಶಿ: ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭ ಸ್ಥಾನದಲ್ಲಿ ಈ ಲಕ್ಷ್ಮಿನಾರಾಯಣ ರಾಜಯೋಗ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯ ಹಲವು ಪಟ್ಟು ಹೆಚ್ಚಾಗಲಿದೆ. ಈ ಅವಧಿಯಲ್ಲಿ ಯಾವುದಾದರೊಂದು ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ, ಅದು ಮುಂದೆ ಹೋಗಿ ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿದ್ದು, ಹೊಸ ಹೊಸ ಮೂಲಗಳಿಂದ ನೀವು ಹಣವನ್ನು ಸಂಪಾದಿಸುವಿರಿ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಮಗುವಿನ ನಿರೀಕ್ಷೆ ಇರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ. 

ಮೀನ ರಾಶಿ: ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಲಕ್ಷ್ಮಿನಾರಾಯಣ ರಾಜಯೋಗ ನಿರ್ಮಾಣಗೊಳ್ಳಲಿರುವ ಕಾರಣ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ನೌಕರ ವರ್ಗದ ಜನರ ವೇತನ ಹಾಗೂ ಹುದ್ದೆ ಎರಡರಲ್ಲೂ ಉನ್ನತಿ ಇರಲಿದೆ. ಘನತೆ-ಗೌರವ-ಧನ ಎಲ್ಲವೂ ಹೆಚ್ಚಾಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರವರ್ಗದ ಜನರಿಗೆ ಈ ಅವಧಿಯಲ್ಲಿ ಭಾರಿ ಧನಲಾಭವಾಗಲಿದ್ದು, ವ್ಯಾಪಾರ ವಿಸ್ತರಣೆಯ ಅವರ ಕನಸು ನನಸಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link