ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಭಕರ ಲಕ್ಷ್ಮೀ ನಾರಾಯಣ ಯೋಗ, 3 ರಾಶಿಯವರಿಗೆ ರಾಜವೈಭೋಗ

Wed, 24 Jul 2024-7:02 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಅವಧಿಯಲ್ಲಿ ತನ್ನ ಸಂಚಾರವನ್ನು ಬದಲಾಯಿಸುತ್ತದೆ. 

ಇತ್ತೀಚೆಗಷ್ಟೇ, ಜುಲೈ 19ರಂದು ಗ್ರಹಗಳ ರಾಜಕುಮಾರ ಬುಧ ತನ್ನ ರಾಶಿಚಕ್ರವನ್ನು ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. 

ಜ್ಯೋತಿಷ್ಯದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಈ ತಿಂಗಳಾಂತ್ಯದಲ್ಲಿ ಅರ್ಥಾತ್ ಜುಲೈ 31ರಂದು ತನ್ನ ಸಂಚಾರ ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಈ ರೀತಿಯಾಗಿ ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗ ರಚನೆಯಾಗಲಿದೆ. 

ಸಿಂಹ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡುವುದರಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತಿದೆ. 

ಸಿಂಹ ರಾಶಿಯಲ್ಲಿ ರಚನೆಯಾಗುತ್ತಿರುವ ಲಕ್ಷ್ಮೀ ನಾರಾಯಣ ಯೋಗವು ಎಲ್ಲಾ ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. ಆದರೂ, ಮೂರು ರಾಶಿಯವರಿಗೆ ಈ ಸಮಯವನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ:  ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರ ಬದುಕಿನಲ್ಲಿ ಪ್ರತಿ ಹಂತದಲ್ಲೂ ಯಶಸ್ಸನ್ನು ಈಡಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಬಹುದು. ಮಕ್ಕಳಿಂದಲೂ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. 

ಮಿಥುನ ರಾಶಿ:  ಶುಭ ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವನ್ನು ನೀಡಲಿದೆ. ದಿಢೀರ್ ಧನಲಾಭ, ಕೌಟುಂಬಿಕ ಸುಖದೊಂದಿಗೆ ರಾಜವೈಭೋಗವನ್ನು ಅನುಭವಿಸುವಿರಿ. 

ಸಿಂಹ ರಾಶಿ:  ಸ್ವ ರಾಶಿಚಕ್ರ ಚಿಹ್ನೆಯಲ್ಲಿ ನಿರ್ಮಾಣವಾಗುತ್ತಿರುವ ಮಂಗಳಕರ ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ವೇಳೆ ಕೆಲಸದಲ್ಲಿ ಮೆಚ್ಚುಗೆ, ಕುಟುಂಬದಲ್ಲಿ ಪ್ರಗತಿ, ಆದಾಯದಲ್ಲಿ ಹೆಚ್ಚಳದ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದುವಿರಿ.   

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link